ಕರ್ನಾಟಕ

karnataka

ETV Bharat / bharat

ನಕಲಿ ಟಿಆರ್​​ಪಿ ಹಗರಣ: ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಅರೆಸ್ಟ್ - ಹನ್ಸಾ ರಿಸರ್ಚ್ ಗ್ರೂಪ್

ಮುಂಬೈ ಪೊಲೀಸರು ಟಿಆರ್‌ಪಿ ವಂಚನೆ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಗ್ಯಾನ್​ಶ್ಯಾಮ್​​​​​​​ ಸಿಂಗ್ ಅವರನ್ನು ಬಂಧಿಸಿದ್ದಾರೆ. ನಕಲಿ ಟಿಆರ್​​ಪಿ ರೇಟಿಂಗ್​ ಹಗರಣದಲ್ಲಿ ಕೆಲ ಹಿಂದಿ ಹಾಗೂ ಇಂಗ್ಲೀಷ್​​​ ವಾಹಿನಿಗಳ ಹೆಸರು ಕೇಳಿಬಂದಿತ್ತು.

senior-republic-tv-executive-held-in-fake-trp-scam
ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಅರೆಸ್ಟ್

By

Published : Nov 10, 2020, 12:26 PM IST

ಮುಂಬೈ: ನಕಲಿ ಟಿಆರ್​ಪಿ ರೇಟಿಂಗ್​​​ ಪ್ರಕರಣದಲ್ಲೀಗ ರಿಪಬ್ಲಿಕ್ ಟಿವಿಯ ವಿತರಣಾ ವಿಭಾಗದ ಹಿರಿಯ ಮುಖ್ಯಸ್ಥ ಗ್ಯಾನ್​ಶ್ಯಾಮ್​ ಸಿಂಗ್​ರನ್ನು ಮುಂಬೈ ಅಪರಾಧ ದಳ ಪೊಲೀಸರು ಬಂಧಿಸಿದ್ದಾರೆ.

ರಿಪಬ್ಲಿಕ್ ಟಿವಿ ನೆಟ್​ವರ್ಕ್​ನ ಸಹಾಯಕ ಉಪಾಧ್ಯಕ್ಷರು ಆಗಿರುವ ಸಿಂಗ್​ ಅವರನ್ನು ಬೆಳಗ್ಗೆ 7:40ರ ಸುಮಾರಿಗೆ ನಿವಾಸದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಅಪರಾಧ ವಿಭಾಗದ ಗುಪ್ತಚರ ಇಲಾಖೆ ಒಟ್ಟು 12 ಮಂದಿಯನ್ನುಈವರೆಗೆ ಬಂಧಿಸಿದೆ.

ಇದಕ್ಕೂ ಮೊದಲು ಸಿಂಗ್ ಅವರನ್ನು ಅಪರಾಧ ದಳದ ಗುಪ್ತಚರ ವಿಭಾಗವು ಈ ಪ್ರಕರಣ ಸಂಬಂಧ ಹಲವು ಬಾರಿ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೇಟಿಂಗ್ ಏಜೆನ್ಸಿ ಬ್ರಾಡ್‌ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಪೊಲೀಸರಿಗೆ ದೂರು ನೀಡಿದಾಗ, ಕೆಲವು ಚಾನೆಲ್‌ಗಳು ಜಾಹೀರಾತುದಾರರಿಗೆ ಆಮಿಷವೊಡ್ಡಲು ಟಿಆರ್‌ಪಿ ಸಂಖ್ಯೆಯನ್ನು ಯುಕ್ತಿಯಿಂದ ಬದಲಾವಣೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದ ಬಳಿಕ ನಕಲಿ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿದೆ.

ABOUT THE AUTHOR

...view details