ನವದೆಹಲಿ:ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾದ ಬಿರುಕಿನ ಹಿನ್ನೆಲೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಪಕ್ಷದ ನಡೆ ವಿರುದ್ಧ ಹಲವು ಹೇಳಿಕೆ ನೀಡಿದ್ದರು. ಕಾಂಗ್ರೆಸ್ನ ಅಧ್ಯಕ್ಷರು ಯಾರೆಂಬುದು ಗೊತ್ತಾಗುತ್ತಿಲ್ಲ. ಯಾರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೆ ಸಿಬಲ್ ನಿವಾಸದೆದರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಗದ್ದಲಕ್ಕೆ ಕಾರಣರಾಗಿದ್ದರು.
ಇದೀಗ ಕಾಂಗ್ರೆಸ್ ನಾಯಕರು ಸಿಬಲ್ ಪರ ವಾದಕ್ಕೆ ನಿಂತಿದ್ದಾರೆ. ಸಿಬಲ್ ಮನೆ ಮುಂದೆ ಪ್ರತಿಭಟನೆ ನಡೆಸಿ ಸಂಘಟಿತ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಲಾಮ್ ನಬಿ ಆಜಾದ್, ನಿನ್ನೆ ರಾತ್ರಿ ಕಪಿಲ್ ಸಿಬಲ್ ನಿವಾಸದ ಮುಂದೆ ನಡೆಸಿರುವ ‘ಸಂಘಟಿತ ಗೂಂಡಾಗಿರಿ’ಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ನಿಷ್ಠಾವಂತ ಕಾಂಗ್ರೆಸಿಗರಾಗಿದ್ದಾರೆ ಮತ್ತು ಸಂಸತ್ತಿನ ಒಳಗೆ ಮತ್ತು ಹೊರಗೆ ಪಕ್ಷಕ್ಕಾಗಿ ಹೋರಾಡುತ್ತಿದ್ದಾರೆ. ಪಕ್ಷದ ಯಾವುದೇ ಸಲಹೆಯನ್ನು ಹತ್ತಿಕ್ಕುವ ಬದಲು ಸ್ವಾಗತಿಸಬೇಕು, ಗೂಂಡಾಗಿರಿ ಸ್ವೀಕಾರಾರ್ಹವಲ್ಲ ಎಂದು ಆಜಾದ್ ಟ್ವೀಟ್ ಮಾಡಿದ್ದಾರೆ.