ನವದೆಹಲಿ: 2022ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಮಹನೀಯರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಸಾರ್ವಜನಿಕ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಜಮ್ಮು ಕಾಶ್ಮೀರದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಕೇಂದ್ರ ಸರ್ಕಾರ ಪದ್ಮ ಭೂಷಣ ನೀಡಿದೆ. ಪ್ರಶಸ್ತಿ ನೀಡಿದ್ದಕ್ಕಾಗಿ ಈ ಹಿಂದಿನಿಂದಲೂ ಪರ-ವಿರೋಧ ಚರ್ಚೆ ನಡೆಯುತ್ತಿದ್ದವು. ಇದರ ಬಗ್ಗೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.
ಇದನ್ನೂ ಓದಿ:ಬಡತನದ ಬೇಗೆಯಲ್ಲಿ ಗಂಡು ಮಗು ಹುಟ್ಟದ ಕೋಪ: ಹೆಣ್ಣು ಹಸುಳೆ ಕೊಲೆಗೈದು ಒಲೆಗೆಸೆದ ತಾಯಿ
ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿರುವ ಗುಲಾಂ ನಬಿ ಆಜಾದ್, ದೇಶ ನಾವು ಮಾಡುವ ಕೆಲಸವನ್ನು ಗುರುತಿಸುತ್ತದೆ. ನಾವು ಮಾಡಿರುವ ಕೆಲಸಕ್ಕೆ ಮನ್ನಣೆ ಸಿಕ್ಕಾಗ ಸಂತಸವಾಗುತ್ತದೆ. ಜೊತೆಗೆ ಪ್ರಶಸ್ತಿ ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡುತ್ತದೆ. ಪ್ರಶಸ್ತಿ ಪಡೆದುಕೊಂಡವರು, ಪ್ರಶಸ್ತಿ ಕೊಟ್ಟವರು ಯಾರು ಎಂಬುದರ ಬಗ್ಗೆ ಯೋಚನೆ ಮಾಡಬಾರದು. ಪದ್ಮ ಪ್ರಶಸ್ತಿ ನೀಡುವುದು ಯಾವುದೇ ಸರ್ಕಾರವಲ್ಲ. ಆದರೆ, ದೇಶ ಈ ಗೌರವ ನೀಡುತ್ತದೆ ಎಂದಿದ್ದಾರೆ.
ಪದ್ಮ ಪ್ರಶಸ್ತಿ ಪಡೆದು ಮಾತನಾಡಿದ ಗುಲಾಂ ನಬಿ ಆಜಾದ್
2022ರ ಸಾಲಿನಲ್ಲಿ ಮೂರು ವಿಭಾಗ ಸೇರಿ ಒಟ್ಟು 128 ಪದ್ಮಪ್ರಶಸ್ತಿ ನೀಡಲಾಗಿದ್ದು, ನಾಲ್ಕು ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿ ಒಳಗೊಂಡಿದೆ.