ಕರ್ನಾಟಕ

karnataka

ETV Bharat / bharat

ಗಲ್ಲಿ ಕ್ರಿಕೆಟ್ ಜಗಳ.. ಮೂವರ ಮಹಿಳೆಯರ ಮೇಲೆ ಆ್ಯಸಿಡ್​ ದಾಳಿ ನಡೆಸಿದ 60ರ ವೃದ್ಧ! - ಯುಪಿಯಲ್ಲಿ ಮೂವರ ಮಹಿಳೆಯರ ಮೇಲೆ ಆ್ಯಸಿಡ್​ ದಾಳಿ ನಡೆಸಿದ ವೃದ್ಧ

ಉತ್ತರಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದ ಗಲ್ಲಿ ಕ್ರಿಕೆಟ್ ಜಗಳ ಆ್ಯಸಿಡ್​ ದಾಳಿಯಲ್ಲಿ ಅಂತ್ಯ ಕಂಡಿದೆ. ಬೀದಿ ಕ್ರಿಕೆಟ್​ ಜಗಳಕ್ಕೆ ಕೋಪಗೊಂಡ ವೃದ್ಧನೊಬ್ಬ ಅಲ್ಲಿದ್ದ ಮಹಿಳೆಯರಿಬ್ಬರು ಮತ್ತು ಯುವತಿ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದಾನೆ.

senior citizen throws acid, senior citizen throws acid on women, senior citizen throws acid on women in UP, UP news, ಮೂವರ ಮಹಿಳೆಯರ ಮೇಲೆ ಆ್ಯಸಿಡ್​ ದಾಳಿ, ಮೂವರ ಮಹಿಳೆಯರ ಮೇಲೆ ಆ್ಯಸಿಡ್​ ದಾಳಿ ನಡೆಸಿದ ವೃದ್ಧ, ಯುಪಿಯಲ್ಲಿ ಮೂವರ ಮಹಿಳೆಯರ ಮೇಲೆ ಆ್ಯಸಿಡ್​ ದಾಳಿ ನಡೆಸಿದ ವೃದ್ಧ, ಯುಪಿ ಸುದ್ದಿ,
ಮೂವರ ಮಹಿಳೆಯರ ಮೇಲೆ ಆ್ಯಸಿಡ್​ ದಾಳಿ ನಡೆಸಿದ 60ರ ವೃದ್ಧ

By

Published : Nov 6, 2021, 6:31 AM IST

ಬಂದಾ:ಜಿಲ್ಲೆಯ ಕೈಲಾಶಪುರಿಯಲ್ಲಿ ದಾರುಣ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಯುವತಿ ಮತ್ತು ಇಬ್ಬರು ಮಹಿಳೆಯರ ಮೇಲೆ 60 ವರ್ಷದ ವೃದ್ಧ ಆ್ಯಸಿಡ್​ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾನೆ.

ಪೊಲೀಸರ ಪ್ರಕಾರ:ಅಶುತೋಶ್ ತ್ರಿಪಾಠಿ ಅಲಿಯಾಸ್ ಗುಲ್ಲಿ ಎಂಬ ವೃದ್ಧನ ಮನೆಯ ಮುಂದೆ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಮಕ್ಕಳು ಆಟವಾಡುತ್ತಿರುವುದನ್ನು ಅಕ್ಕಪಕ್ಕದ ಮನೆಯವರು ಸಹ ನೋಡುತ್ತಿದ್ದರು. ಈ ವೇಳೆ ಮಕ್ಕಳು ಒಬ್ಬರಿಗೊಬ್ಬರು ಜಗಳವಾಡಿಕೊಂಡಿದ್ದಾರೆ.

ಮಕ್ಕಳ ಜಗಳ ತ್ರಿಪಾಠಿಗೆ ತೀವ್ರ ಕಿರಿಕಿರಿ ಉಂಟು ಮಾಡಿದೆ. ಇದರಿಂದ ಕೋಪಗೊಂಡ ತ್ರಿಪಾಠಿ ಮಕ್ಕಳ ಪಂದ್ಯ ನೋಡುತ್ತಿದ್ದ ಮಹಿಳೆಯರ ಮೇಲೆ ಆ್ಯಸಿಡ್​ ಎರಚಿದ್ದಾನೆ. ಈ ಆ್ಯಸಿಡ್​ ದಾಳಿಯಲ್ಲಿ ರಾಣಿ ಸಿಂಗ್, ಲಕ್ಷ್ಮೀ ಸಿಂಗ್, ಶೋಭಾಸಿಂಗ್ ಎಂಬ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details