ಮುಂಬೈ(ಮಹರಾಷ್ಟ್ರ) : ಭಾರತೀಯ ಚುನಾವಣಾ ಆಯೋಗವು 'ಬಿಲ್ಲು ಮತ್ತು ಬಾಣ'ವನ್ನು ಸ್ಥಗಿತಗೊಳಿಸಿದ ನಂತರ ಶಿವಸೇನೆಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವು ಕತ್ತಿ, ಕಹಳೆ ಮತ್ತು ಗದೆಯನ್ನು ಚುನಾವಣಾ ಆಯೋಗ ಅನುಮತಿಗಾಗಿ ಮೂರು ಚಿನ್ಹೆಗಳನ್ನು ಸೂಚಿಸಿದ್ದಾರೆ.
ನವೆಂಬರ್ 3 ರಂದು ನಡೆಯಲಿರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಠಾಕ್ರೆ ಮತ್ತು ಪ್ರಸ್ತುತ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಗಳು ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆ ಬಿಲ್ಲು ಮತ್ತು ಬಾಣವನ್ನು ಬಳಸದಂತೆ ಚುನಾವಣಾ ಆಯೋಗ ಶನಿವಾರ ನಿರ್ಬಂಧ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಶಿಂದೆ ಬಣ ಈ ಚಿನ್ಹೆ ನೀಡುವಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಗದೆ, ಕಹಳೆ ಮತ್ತು ಕತ್ತಿ : ಆಯೋಗವು ಇತ್ತೀಚೆಗೆ ಮಧ್ಯಂತರ ಆದೇಶವನ್ನು ಹೊರಡಿಸಿದ್ದು, ಶಿವಸೇನೆಯ ಎರಡೂ ಗುಂಪುಗಳು ಹೆಸರುಗಳು ಮತ್ತು ಚಿಹ್ನೆಗಳ ಬಗ್ಗೆ ಹಕ್ಕು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರದೊಳಗೆ ಆಯಾ ಬಣಗಳಿಗೆ ಮೂರು ಹೊಸ ಹೆಸರುಗಳು ಮತ್ತು ಚಿಹ್ನೆಗಳನ್ನು ಸೂಚಿಸುವಂತೆ ಹೇಳಿದೆ. ಅದರಂತೆ, ಎರಡೂ ಪಕ್ಷಗಳು ಪರ್ಯಾಯ ಚಿಹ್ನೆಗಳನ್ನು ಆಯ್ಕೆ ಮಾಡಬೇಕಿದೆ. ಶಿಂಧೆ ಬಣದ ಕಾರ್ಯಕಾರಿ ಸಭೆಯಲ್ಲಿ ಕಹಳೆ, ಗದೆ ಮತ್ತು ಕತ್ತಿಯನ್ನು ಸೂಚಿಸಲಾಗಿದೆ.