ಕರ್ನಾಟಕ

karnataka

ETV Bharat / bharat

ಅತ್ಯಾಚಾರ ಪ್ರಕರಣದ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಸೂಚನೆ: ರಾಜ್ಯಪಾಲರಿಗೆ ಶಿವಸೇನೆ ತರಾಟೆ

ಅತ್ಯಾಚಾರ ಪ್ರಕರಣವೊಂದರ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ ಗವರ್ನರ್​ಗೆ ಶಿವಸೇನೆ ತರಾಟೆ ತೆಗೆದುಕೊಂಡಿದೆ.

By

Published : Sep 23, 2021, 2:12 PM IST

ಶಿವಸೇನೆ
ಶಿವಸೇನೆ

ಮುಂಬೈ (ಮಹಾರಾಷ್ಟ್ರ): ಸಾಕಿನಾಕ ಅತ್ಯಾಚಾರ ಪ್ರಕರಣದ ಕುರಿತು ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕಾಗಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ.

ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಲ್ಕು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಹೇಳಿದೆ.

ಹಲವು ರಾಜ್ಯಗಳಲ್ಲಿ ನಕ್ಸಲ್ ದಾಳಿ ಹೆಚ್ಚುತ್ತಿರುವ ಕಾರಣ ಗೃಹ ಸಚಿವ ಅಮಿತ್​ ಶಾ, ಮುಖ್ಯಮಂತ್ರಿಗಳ ತುರ್ತು ಸಭೆ ಕರೆಯಬೇಕಾಗಿತ್ತು ಎಂದು ಸೇನಾ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಹೇಳಿದೆ. ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ, ಅನೇಕ ಬಿಜೆಪಿ ನಾಯಕರಿಗೆ ಸರ್ಕಾರ ಟೀಕಿಸುವುದಕ್ಕಾಗಿಯೇ 'Z+' ಭದ್ರತೆ ನೀಡಲಾಗಿದೆ. ಪಶ್ಚಿಮ ಬಂಗಾಳ. ಮಹಾರಾಷ್ಟ್ರ ಇತ್ಯಾದಿ ರಾಜ್ಯಗಳಲ್ಲಿ ಇದೇ ರೀತಿಯ ವ್ಯವಸ್ಥೆ ಇದೆ ಎಂದು ಉಲ್ಲೇಖಿಸಲಾಗಿದೆ.

ಬಿಜೆಪಿಗೆ ಶಿವಸೇನೆ ತಿರುಗೇಟು

ಜನರ ಸುರಕ್ಷತೆಗಾಗಿ ಭದ್ರತೆ ಒದಗಿಸಬೇಕಾದ ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ಭದ್ರತೆಗಾಗಿ ನೂರಾರು ಸಿಆರ್‌ಪಿಎಫ್ ಜವಾನರನ್ನು ನಿಯೋಜಿಸಲಾಗಿದೆ ಎಂದು ಶಿವಸೇನೆ ಆರೋಪಿಸಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಲ್ಲ. ಪ್ರಯಾಗ್​ರಾಜ್​ನಲ್ಲಿ ಮಹಾಂತ್ ನರೇಂದ್ರಗಿರಿ ಮಹಾರಾಜ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಅಂಥ ಮಹಾನ್ ಸಂತನ ಅನುಮಾನಾಸ್ಪದ ಸಾವು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಉತ್ತರಪ್ರದೇಶ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವ ಮೂಲಕ ಈ ವಿಷಯವನ್ನು ಚರ್ಚಿಸಬೇಕು ಎಂದು ತಿರುಗೇಟು ನೀಡಿದೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಕುಟುಂಬಕ್ಕೂ ಈಗ ಜೀವ ಬೆದರಿಕೆಯಿದೆ. ನಮ್ಮ ರಾಜ್ಯ, ಉತ್ತರ ಪ್ರದೇಶ, ಮಧ್ಯಪ್ರದೇಶದ ರಾಜ್ಯಪಾಲರುಗಳಿಗೆ ಅದೇ ಕಾಳಜಿ ಯಾಕೆ ಇರಬಾರದು? ಅಲ್ಲಿನ ರಾಜಭವನದ ಭಾವನೆ ಸತ್ತಿದೆಯೇ? ಎಂದು ಸೇನೆ ಪ್ರಶ್ನಿಸಿದೆ.

ಮಹಾರಾಷ್ಟ್ರದ ಬಿಜೆಪಿಯ ಮಹಿಳಾ ಮಂಡಳಿಯು ಮಹಿಳೆಯರ ಮೇಲಿನ ಅನ್ಯಾಯ - ದೌರ್ಜನ್ಯದ ಬಗ್ಗೆ ಎಷ್ಟು ಆಕ್ರಮಣಕಾರಿಯಾಗಿದೆ ಎಂದರೆ ಅವರು ನ್ಯಾಯಕ್ಕಾಗಿ ರಾಜಭವನದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಇಂಥ ಜಾಗೃತ ಮಹಿಳಾ ಮಂಡಲ ಇಲ್ಲದಿರುವುದಕ್ಕೆ ಅವರು ವಿಷಾದಿಸಬೇಕಲ್ಲವೇ? ಸಕಿನಾಕಾ ಮತ್ತು ರೇವಾ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯದ ನಡುವಿನ ವ್ಯತ್ಯಾಸವೇನು? ಎಂದು ಪ್ರಶ್ನೆ ಮಾಡಿದೆ.

ಈ ಎರಡೂ ಘಟನೆಗಳಲ್ಲಿ ಹೆಣ್ಮಕ್ಕಳನ್ನು ಹತ್ಯೆಗೈಯ್ಯಲಾಗಿದೆ. ಆದರೆ, ಅವರ ಪ್ರಕಾರ ಮಹಾರಾಷ್ಟ್ರದಲ್ಲಿ ಮಾತ್ರವೇ ಈ ಘಟನೆ ಸಂಭವಿಸಿದೆಯಾ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.

ABOUT THE AUTHOR

...view details