ಮಥುರಾ :ವೃಂದಾವನ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಕ್ರಮ ಮಾರ್ಗದ ಮದನ್ ಮೋಹನ್ ಮಂದಿರ ನಿವಾಸಿಯೋರ್ವ ಸುಮಾರು ಒಂದೂವರೆ ತಿಂಗಳಿನಿಂದ ತನ್ನ ಪತ್ನಿಯನ್ನು ಬಿಟ್ಟು ನಾಪತ್ತೆಯಾಗಿದ್ದ.
ಈ ಬಗ್ಗೆ ಆತನ ಪತ್ನಿ, ತನ್ನ ಗಂಡ ನಾಪತ್ತೆಯಾದ ಬಗ್ಗೆ ವೃಂದಾವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಏತನ್ಮಧ್ಯೆ, ಯುವಕನ ಪತ್ನಿಗೆ ಆಕೆಯ ಪತಿ ಇನ್ನೋರ್ವ ಯುವತಿಯೊಂದಿಗೆ ಒಂದೂವರೆ ತಿಂಗಳಿನಿಂದ ವಾಸಿಸುತ್ತಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ.
ಬಳಿಕ ಪತ್ನಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಆಕೆಯ ಗಂಡನನ್ನು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ, ಆತನ ಗೆಳತಿ ಪೊಲೀಸ್ ಠಾಣೆಗೆ ಭೇಟಿಯಾಗಲು ಬಂದಿದ್ದಾಳೆ. ಈ ವೇಳೆ ಆತನ ಪತ್ನಿಗೆ ಸಿಕ್ಕಿಬಿದ್ದಿದ್ದಾಳೆ. ಆ ನಂತರ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪತ್ನಿ ತನ್ನ ಗಂಡನ ಗೆಳತಿಯನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿ ಕ್ರಮಕ್ಕೆ ಒತ್ತಾಯಿಸಿದ್ದಾಳೆ.
ಪತ್ನಿಯ ಪ್ರಕಾರ, ಆಕೆ 11 ವರ್ಷಗಳ ಹಿಂದೆ ಪರಿಕ್ರಮ ಮಾರ್ಗದಲ್ಲಿರುವ ಮದನ್ ಮೋಹನ್ ದೇವಸ್ಥಾನ ಪ್ರದೇಶದ ನಿವಾಸಿಯನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ, ಪತಿ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
ಅವನು ಅವಳೊಂದಿಗೆ ಸುಮಾರು ಒಂದೂವರೆ ತಿಂಗಳಿನಿಂದ ವಾಸಿಸುತ್ತಿದ್ದ ಎಂದು ಹೇಳಿದ್ದಾಳೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ಪತಿಯು ತನ್ನ ಅನುಮತಿಯಿಲ್ಲದೆ ಮತ್ತೊಂದು ಮದುವೆಯಾಗಿರುವುದಾಗಿ ಪತ್ನಿ ಆರೋಪಿಸಿದ್ದಾಳೆ. ಪತ್ನಿಯ ದೂರಿನ ನಂತರ, ಗೆಳತಿಯೊಂದಿಗೆ ವಾಸಿಸುತ್ತಿದ್ದ ಗಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏತನ್ಮಧ್ಯೆ, ಪೊಲೀಸ್ ಠಾಣೆಯ ಹೊರಗೆ ನಿಂತಿದ್ದ ಗೆಳತಿಯನ್ನು ನೋಡಿದ ತಕ್ಷಣ ಪತ್ನಿಯ ಸಿಟ್ಟು ಹೆಚ್ಚಾಗಿದೆ.
ರಂಗಜಿ ಪೊಲೀಸ್ ಠಾಣೆ ಪ್ರಭಾರಿ ಜತಿನ್ ಪಾಲ್ ಮಾತನಾಡಿ, ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ. ವಿಚಾರಣೆಯ ಸಮಯದಲ್ಲಿ ಪತಿಯು ತಾನು ತನ್ನ ಹೆಂಡತಿಯೊಂದಿಗೆ ವಾಸಿಸಲು ಬಯಸುವುದಿಲ್ಲ ಎಂದು ಹೇಳಿದ್ದಾನೆ. ಅವನು ಜೈಲಿಗೆ ಹೋಗಲು ಸಿದ್ಧ. ಆದರೆ, ಹೆಂಡತಿಯೊಂದಿಗೆ ವಾಸಿಸಲು ಸಿದ್ಧನಿಲ್ಲ ಎಂದಿದ್ದಾನೆ.
ತನ್ನ ಹೆಂಡತಿಯಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ನೀಡಿದ್ದಾನೆ. ಮತ್ತೊಂದೆಡೆ, ಹೆಂಡತಿ ಯಾವುದೇ ಕಾರಣಕ್ಕೂ ವಿಚ್ಛೇದನಕ್ಕೆ ಸಿದ್ಧವಿಲ್ಲ ಎಂದು ಹೇಳಿದರು. ಅಲ್ಲದೇ ಮತ್ತೋರ್ವ ಯುವತಿ ತನಗೆ ಯುವಕನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾಳೆ.