ಕರ್ನಾಟಕ

karnataka

ETV Bharat / bharat

ಬೇಲಿಯೇ ಎದ್ದು..! ಚಂಡೀಗಢದ ಬ್ಯಾಂಕ್​ನಿಂದ ₹ 4 ಕೋಟಿ ಕದ್ದು ಭದ್ರತಾ ಸಿಬ್ಬಂದಿ ಪರಾರಿ - ಚಂಡೀಗಢ ಇತ್ತೀಚಿನ ಸುದ್ದಿ

ಚಂಡೀಗಢದ ಸೆಕ್ಟರ್ 34ರಲ್ಲಿರುವ ಆಕ್ಸಿಸ್ ಬ್ಯಾಂಕ್ ಕಚೇರಿಯಿಂದ ಸೆಕ್ಯೂರಿಟಿ ಗಾರ್ಡ್​ ಓರ್ವ 4.04 ಕೋಟಿ ರೂ.ಗಳನ್ನು ಕದ್ದು ಪರಾರಿಯಾಗಿದ್ದಾನೆ.

Chandigarh
ಚಂಡೀಗಢದ ಬ್ಯಾಂಕ್​

By

Published : Apr 12, 2021, 8:31 AM IST

ಚಂಡೀಗಢ (ಪಂಜಾಬ್):ಮೊಹಾಲಿಯ ಸೊಹಾನಾ ಮೂಲದ ಸುಮಿತ್ ಎಂದು ಗುರುತಿಸಲ್ಪಟ್ಟ ಭದ್ರತಾ ಸಿಬ್ಬಂದಿ​ ಭಾನುವಾರ ಬೆಳಗ್ಗೆ ಚಂಡೀಗಢದ ಸೆಕ್ಟರ್ 34ರಲ್ಲಿರುವ ಆಕ್ಸಿಸ್ ಬ್ಯಾಂಕ್ ಕಚೇರಿಯಿಂದ 4.04 ಕೋಟಿ ರೂ.ಗಳನ್ನು ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಳೆದ ಮೂರು ವರ್ಷಗಳಿಂದ ಕರ್ತವ್ಯದಲ್ಲಿರುವ ಸುಮಿತ್​, ಚಂಡೀಗಢದಲ್ಲಿರುವ ಎಟಿಎಂಗಳಿಗೆ ನಗದು ವಿತರಣೆಗಾಗಿ ಕರೆನ್ಸಿ ಸಂಗ್ರಹಿಸಲು ಬಳಸಲಾಗುತ್ತಿದ್ದ ಒಂದು ಸ್ಟೋರ್​ನಿಂದ ಹಣ ಕದ್ದಿದ್ದಾನೆ ಎಂದು ಮೂಲಗಳು ತಿಳಿಸಿದೆ.

ಆರೋಪಿ ಸುಮಿತ್​ನ ಫೋನ್​ ಸ್ವಿಚ್ಡ್​ ಆಫ್​ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೆಕ್ಟರ್ -34 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details