ಚಾಂಡೆಲ್(ಮಣಿಪುರ):ನಕ್ಸಲರ ಅತಿ ದೊಡ್ಡ ದಾಳಿ ತಂತ್ರವನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ವಿಫಲಗೊಳಿಸಿರುವ ಘಟನೆ ಮಣಿಪುರ ರಾಜ್ಯದ ಚಾಂಡೆಲ್ನಲ್ಲಿ ನಡೆದಿದ್ದು, ಸುಧಾರಿತ ಸ್ಫೋಟಕ ಸಾಧನಗಳನ್ನು ವಶಕ್ಕೆ ಪಡೆದು, ನಿಷ್ಕ್ರಿಯಗೊಳಿಸಲಾಗಿದೆ.
ನಿಖರ ಮಾಹಿತಿಯನ್ನು ಆಧರಿಸಿ, ಮಣಿಪುರ ಪೊಲೀಸರೊಂದಿಗೆ ಭದ್ರತಾ ಪಡೆಗಳು ಕುಲ್ಜಾಂಗ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ್ದು, ಐಇಡಿಗಳನ್ನು ವಶಕ್ಕೆ ಪಡೆದು, ಬಾಂಬ್ ನಿಷ್ಕ್ರಿಯ ದಳದ ಮೂಲಕ ಐಇಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕೃತ ಮಾಹಿತಿ ದೊರೆತಿದೆ.