ಕರ್ನಾಟಕ

karnataka

ETV Bharat / bharat

ತಪ್ಪಿದ ಭಾರಿ ಅನಾಹುತ: ಬರೋಬ್ಬರಿ 20 ಕೆ.ಜಿ ಸುಧಾರಿತ ಸ್ಫೋಟಕ ವಶಕ್ಕೆ ಪಡೆದ ಸೇನೆ - ಐಇಡಿ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಅನಂತ್‌ನಾಗ್‌ ಜಿಲ್ಲೆಯ ದಮ್ಜನ್ ಪ್ರದೇಶದ ಬಳಿ ಭಯೋತ್ಪಾದಕರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನವನ್ನು ಸೇನೆ ವಶಪಡಿಸಿಕೊಂಡಿದ್ದು, ಸಂಭವಿಸಬಹುದಾದ ಬಹುದೊಡ್ಡ ದುರಂತವನ್ನು ತಪ್ಪಿಸಿದೆ.

Security forces
ಸುಧಾರಿತ ಸ್ಫೋಟಕ ವಶಕ್ಕೆ

By

Published : Jul 14, 2021, 8:51 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಅನಂತ್‌ನಾಗ್‌ ಜಿಲ್ಲೆಯ ಕ್ವಾಜಿಗುಂಡ್‌ನ ದಮ್ಜನ್ ಪ್ರದೇಶದ ಬಳಿ ಮತ್ತೊಮ್ಮೆ ಭಾರಿ ದಾಳಿ ನಡೆಸಲು ಉಗ್ರರು ನಡೆಸಿದ್ದ ಸಂಚನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ.

ಅನಂತ್‌ನಾಗ್‌ ಜಿಲ್ಲೆಯ ದಮ್ಜನ್ ಪ್ರದೇಶದ ರೈಲ್ವೆ ಹಳಿ ಬಳಿ ಉಗ್ರರು ಬರೋಬ್ಬರಿ 20 ಕೆ.ಜಿ ಸುಧಾರಿತ ಸ್ಫೋಟಕ ಸಾಧನ ಇರಿಸಿದ್ದರು. ಇದನ್ನು ನಿನ್ನೆ ಸಂಜೆ ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದು ಕೂಡಲೇ ಬಾಂಬ್ ವಿಲೇವಾರಿ ದಳವನ್ನು ಸ್ಥಳಕ್ಕೆ ಕರೆಯಿಸಿ ಐಇಡಿ ನಿಷ್ಕ್ರಿಯಗೊಳಿಸಲಾಗಿದೆ. ಈ ಮೂಲಕ ಸಂಭವಿಸುತ್ತಿದ್ದ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ.

ಇನ್ನು ಕಳೆದ ಜೂನ್ 7 ರಂದು ಸಹ ಟ್ರಾಲ್​ನ ಸೈಮು ಪ್ರದೇಶದ ಬಳಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡಿದ್ದು, ಸಂಭವಿಸಬಹುದಾದ ಬಹುದೊಡ್ಡ ದುರಂತವನ್ನು ತಪ್ಪಿಸಿದ್ದರು.

ABOUT THE AUTHOR

...view details