ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಭಯೋತ್ಪಾದಕರ ಸೆರೆ: ಪಿಸ್ತೂಲ್‌, ಗ್ರೆನೇಡ್ ಸೇರಿ ಶಸ್ತ್ರಾಸ್ತ್ರ ವಶಕ್ಕೆ - ಪಿಸ್ತೂಲ್‌ ಮತ್ತು ಗ್ರೆನೇಡ್ ಸೇರಿ ಶಸ್ತ್ರಾಸ್ತ್ರ ವಶಕ್ಕೆ

ಕುಪ್ವಾರ ಜಿಲ್ಲೆಯಲ್ಲಿ ಮೂವರು ಭಯೋತ್ಪಾದಕರನ್ನು ಬಂಧಿಸಿ, ಪಿಸ್ತೂಲ್‌ ಮತ್ತು ಗ್ರೆನೇಡ್​ ಸೇರಿ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

security-forces-arrest-three-militants-in-kashmir
ಕಾಶ್ಮೀರದಲ್ಲಿ ಭಯೋತ್ಪಾದಕರ ಸೆರೆ: ಪಿಸ್ತೂಲ್‌, ಗ್ರೆನೇಡ್ ಸೇರಿ ಶಸ್ತ್ರಾಸ್ತ್ರ ವಶಕ್ಕೆ

By

Published : Jul 31, 2022, 9:38 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಭಯೋತ್ಪಾದಕರ ಇರುವಿಕೆ ಬಗ್ಗೆ ಮಾಹಿತಿ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಇದರ ಭಾಗವಾಗಿ ಅಲ್ಲಲ್ಲಿ ವಾಹನ ಚೆಕ್ ಪಾಯಿಂಟ್‌ ಸ್ಥಾಪಿಸಿ ತಪಾಸಣೆ ನಡೆಸಿ ಮೂವರು ಉಗ್ರರನ್ನು ಅರೆಸ್ಟ್​ ಮಾಡಲಾಗಿದೆ.

ಕುಪ್ವಾರ ಜಿಲ್ಲೆಯ ಹದಿಪುರ, ವಾಥೂರ್ ಮತ್ತು ಅಲೂಸಾ ಪ್ರದೇಶದಲ್ಲಿ ಈ ಮೂವರು ಉಗ್ರರನ್ನು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಮೂರು ಪಿಸ್ತೂಲ್‌ಗಳು, ಎರಡು ಮ್ಯಾಗಜೀನ್‌ಗಳು ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ.. ಮೊಬೈಲ್​ ಸಂಖ್ಯೆ​ ಪಾಕ್​ನಲ್ಲಿ ಆ್ಯಕ್ಟಿವ್​

ABOUT THE AUTHOR

...view details