ನವದೆಹಲಿ:ಭಾರತದಾದ್ಯಂತ ಇಂದು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ದಿನಾಚರಣೆಯ ಪೂರ್ವಭಾವಿಯಾಗಿ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸರು ಭದ್ರತಾ ವ್ಯವಸ್ಥೆ ಹೆಚ್ಚಿಸಿದ್ದಾರೆ. ಸ್ವಾತ್ರಂತ್ಯೋತ್ಸವ ಹಿನ್ನೆಲೆ ಬಿಗಿ ಬಂದೋಬಸ್ತ್ ಹೇರಲಾಗಿದ್ದು, ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಸೋಮವಾರವೇ ಭಾರತದ ವಿವಿಧ ಕಟ್ಟಡ ಮತ್ತು ಸ್ಮಾರಕಗಳನ್ನು ತ್ರಿವರ್ಣ ಬಣ್ಣಗಳಿಂದ ಅಲಂಕರಿಸಿ ಬೆಳಗಿಸಲಾಗಿದೆ. ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ರಾಜ್‌ಕೋಟ್ ಪೊಲೀಸರೊಂದಿಗೆ ತ್ರಿರಂಗ ರ‍್ಯಾಲಿಯನ್ನು ನಡೆಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಮೀಡಿಯಾ ಟ್ರೀಯು ಕೇಸರಿ ಬಿಳಿ ಹಸಿರು ಬಣ್ಣದ ಲೈಟಿಂಗ್ಸ್ಗಳಿಂದ ಅಲಂಕಾರಗೊಂಡಿದ್ದು, ಆಕರ್ಷಣೀಯವಾಗಿದೆ. ಹಾಗೆ ಉತ್ತರ ಪ್ರದೇಶದ ವಾರಾಣಸಿ ರೈಲು ನಿಲ್ದಾಣ ಮತ್ತು ಹೈದರಾಬಾದ್‌ನ ಚಾರ್ಮಿನಾರ್ ಕೂಡ ರಾಷ್ಟ್ರಧ್ವಜ ಬಣ್ಣಗಳಿಂದ ಪ್ರಕಾಶಿಸಲ್ಪಟ್ಟಿದೆ. ಇವುಗಳಲ್ಲದೇ ಕಲ್ಕತ್ತಾ ಹೈಕೋರ್ಟ್, ಹೌರಾ ಸೇತುವೆ ಮತ್ತು ಪಶ್ಚಿಮ ಬಂಗಾಳದ ವಿಕ್ಟೋರಿಯಾ ಸ್ಮಾರಕವನ್ನು ಕೂಡ ತ್ರಿವರ್ಣ ಧ್ವಜದ ಬಣ್ಣದ ಕ್ರಮದ ರೀತಿಯಲ್ಲೇ ಅಲಂಕರಿಸಲಾಗಿದೆ.
ಹಳೇ ದೆಹಲಿ ರೈಲು ನಿಲ್ದಾಣ, ಹೊಸ ದೆಹಲಿ ರೈಲು ನಿಲ್ದಾಣ ಮತ್ತು ಇಂಡಿಯಾ ಗೇಟ್ ಅಲಂಕಾರಗೊಂಡಿದ್ದು, 77 ನೇ ಸ್ವಾತಂತ್ರ್ಯವನ್ನು ಸಾರಿ ಸಾರೀ ಹೇಳುತ್ತಿದೆ. ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ನವರು ಪೊಲೀಸರೊಂದಿಗೆ ತ್ರಿವರ್ಣ ಬಣ್ಣದ ಧ್ವಜವನ್ನು ಹಿಡಿದು ತಿರಂಗ ರ‍್ಯಾಲಿ ನಡೆಸಿದರು. ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಗಡಿಯಾರ ಗೋಪುರವು ತ್ರಿವರ್ಣ ಬೆಳಕಿನಲ್ಲಿ ಬೆಳಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಕೂಡ ಕೇಸರಿ ಬಿಳಿ ಹಸಿರಿಂದ ಕಂಗೊಳಿಸುತ್ತಿದೆ.
ಇನ್ನು ದೆಹಲಿಯಲ್ಲಿ ಸುರಕ್ಷತೆಗಾಗಿ 40,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಡ್ರೋನ್ ವಿರೋಧಿ ರಾಡಾರ್‌ಗಳು, ವಿಮಾನ ವಿರೋಧಿ ಗನ್‌ಗಳು, ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಕ್ಯಾಮೆರಾಗಳು ಮತ್ತು ಸೀಲ್ಡ್ ಗಡಿಗಳು ರೀತಿಯ ಭದ್ರತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಕೆಂಪುಕೋಟೆಯಲ್ಲಿ 21 ಗನ್ ಸೆಲ್ಯೂಟ್ ಮೂಲಕ ರಾಷ್ಟ್ರಧ್ವಜರೋಹಣ ಮಾಡಲಿದ್ದಾರೆ. ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೆ ಕೆಂಪುಕೋಟೆಗೆ ಪ್ರಮುಖ ಗಣ್ಯರು ಸೇರಿದಂತೆ ಸುಮಾರು 30,000 ಜನರು ಆಗಮಿಸುವ ಹಿನ್ನೆಲೆ ದೆಹಲಿ ಪೊಲೀಸರು ವಾಹನಗಳ ಗಸ್ತು ಮತ್ತು ತಪಾಸಣೆ ಹೆಚ್ಚಿಸಿದ್ದಾರೆ.