ಮುಂಬೈ: ನಗರದ ಸಚಿವಾಲಯ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಭದ್ರತೆ ಹೆಚ್ಚಿಸಲಾಗಿದೆ.
ಸಚಿವಾಲಯಕ್ಕೆ ಬಾಂಬ್ ಬೆದರಿಕೆ ಕರೆ.. ತೀವ್ರ ತಪಾಸಣೆ - ಮಂತ್ರಾಲಯ ಕಟ್ಟಡ
ಕಟ್ಟಡದ ಒಳಭಾಗದಲ್ಲಿ ಬಾಂಬ್ ಇರಿಸಿರುವುದಾಗಿ ಕರೆಯಲ್ಲಿ ಹೇಳಿದ್ದು, ಮುಂಬೈ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸುತ್ತಿದ್ದಾರೆ.
![ಸಚಿವಾಲಯಕ್ಕೆ ಬಾಂಬ್ ಬೆದರಿಕೆ ಕರೆ.. ತೀವ್ರ ತಪಾಸಣೆ ಸಚಿವಾಲಯ ಕಟ್ಟಡಕ್ಕೆ ಬಾಂಬ್ ಬೆದರಿಕೆ ಕರೆ](https://etvbharatimages.akamaized.net/etvbharat/prod-images/768-512-11954863-thumbnail-3x2-mum.jpg)
ಸಚಿವಾಲಯ ಕಟ್ಟಡಕ್ಕೆ ಬಾಂಬ್ ಬೆದರಿಕೆ ಕರೆ
ಬಾಂಬ್ ಬೆದರಿಕೆ ಕರೆಯ ಬಳಿಕ ಬಾಂಬ್ ಪತ್ತೆ ದಳವು ಕಟ್ಟಡದಲ್ಲಿ ತೀವ್ರ ತಪಾಸಣೆ ನಡೆಸುತ್ತಿದೆ. ಕಟ್ಟಡದ ಒಳಭಾಗದಲ್ಲಿ ಬಾಂಬ್ ಇರಿಸಿರುವುದಾಗಿ ಕರೆಯಲ್ಲಿ ಹೇಳಿದ್ದು, ಮುಂಬೈ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸದಸ್ಯರು ತಪಾಸಣೆ ನಡೆಸುತ್ತಿದ್ದಾರೆ.
ಇತ್ತ ಇದೊಂದು ಹುಸಿ ಕರೆ ಆಗಿರಬಹುದು ಎಂದು ಶಂಕಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.