ಚಂದೌಲಿ :ಗೋರಖ್‌ಪುರದಲ್ಲಿ ಭಯೋತ್ಪಾದಕ ಮುರ್ತಾಜಾ ಬಂಧನ ಮತ್ತು ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ಯುಪಿ ಪೊಲೀಸರು ಅಲರ್ಟ್ ಆಗಿದ್ದಾರೆ. ಗೋರಖ್ನಾಥ್ ದೇವಾಲಯ ಮತ್ತು ತಾಜ್ ಮಹಲ್ ಮೇಲೆ ಭಯೋತ್ಪಾದಕರು ದಾಳಿಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಬಂದಾಕ್ಷಣ ರಾಜ್ಯದಾದ್ಯಂತ ಭದ್ರತಾ ಸಂಸ್ಥೆಗಳು ಅಲರ್ಟ್ ಮೋಡ್‌ನಲ್ಲಿ ಬಂದಿದ್ದಾವೆ.
ತಾಜ್ ಮಹಾಲ್ ಮತ್ತು ಗೋರಖ್ನಾಥ್ ದೇವಾಲಯದ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ. ಹೀಗಾಗಿ, ಗುರುವಾರ ರಾತ್ರಿ ಡಿಡಿಯು ಜಂಕ್ಷನ್‌ನಲ್ಲಿ ಜಿಆರ್‌ಪಿ ಮತ್ತು ಆರ್‌ಪಿಎಫ್ ಜಂಟಿ ತಂಡ ಕಾರ್ಯಾಚರಣೆ ಕೈಗೊಂಡು ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಅರಿವು ಮೂಡಿಸಿದ್ದಲ್ಲದೆ, ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳನ್ನು ತೀವ್ರ ತಪಾಸಣೆ ನಡೆಸಿದರು.
ಓದಿ:ಜಮ್ಮುವಿನಲ್ಲಿ ಎನ್ಕೌಂಟರ್ : ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ
ಹೌರಾ-ದೆಹಲಿ ರೈಲು ಮಾರ್ಗದ ಮಧ್ಯೆ ಅತ್ಯಂತ ಜನನಿಬಿಡ ನಿಲ್ದಾಣಗಳಲ್ಲಿ ಒಂದಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ GRP ಮತ್ತು RPFನ ಜಂಟಿ ತಂಡವು ತೀವ್ರ ತಪಾಸಣೆ ನಡೆಸಿತು. ಗೋರಖ್‌ಪುರದ ಭಯೋತ್ಪಾದಕ ದಾಳಿ ಮತ್ತು ದೆಹಲಿಯ ಹಿಂಸಾಚಾರದ ನಂತರ ಯುಪಿ ಪೊಲೀಸರು ಬಹಳ ಜಾಗರೂಕರಾಗಿದ್ದಾರೆ.
ಭಯೋತ್ಪಾದಕರ ದಾಳಿಯ ಸಂಚು ಕುರಿತು ಸಿಕ್ಕ ಮಾಹಿತಿ ಹಿನ್ನೆಲೆ ಗುರುವಾರ ರಾತ್ರಿ ಜಿಆರ್‌ಪಿ ಮತ್ತು ಆರ್ಪಿಎಫ್ನ ಜಂಟಿ ತಂಡವು ಇದ್ದಕ್ಕಿದ್ದಂತೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್ ತಪಾಸಣೆ ಕೈಗೊಂಡಿತು. ಗೋರಖನಾಥ ದೇವಾಲಯ ಮತ್ತು ತಾಜ್ ಮಹಲ್ ಅನ್ನು ಭಯೋತ್ಪಾದಕರು ದಾಳಿ ನಡೆಸಿ ಸ್ಫೋಟಿಸುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ಲಾಟ್‌ಫಾರ್ಮ್, ಎಫ್‌ಒಬಿ, ಡಿಡಿಯು ಜಂಕ್ಷನ್‌ನ ವಿವಿಧ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬುಕ್ಕಿಂಗ್ ಕಚೇರಿ, ಪೋರ್ಟಿಕೊ ಪ್ರದೇಶ, ಪಾರ್ಸೆಲ್ ಕಚೇರಿ, ಕಾಯುವ ಕೊಠಡಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಪರಿಸ್ಥಿತಿ ಸಹಜವಾಗಿರುವುದು ಕಂಡು ಬಂತು. ಇದರ ಹೊರತಾಗಿಯೂ ಕರ್ತವ್ಯನಿರತ ಭದ್ರತಾ ಸಿಬ್ಬಂದಿಗೆ ತಮ್ಮ ತಮ್ಮ ಬೀಟ್‌ಗಳಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಹೇಳಲಾಗಿದೆ ಎಂದು ಇನ್ಸ್‌ಪೆಕ್ಟರ್ ಆರ್‌ಪಿಎಫ್ ಸಂಜೀವ್ ಕುಮಾರ್ ಹೇಳಿದ್ದಾರೆ.