ಕರ್ನಾಟಕ

karnataka

ಸ್ಮಶಾನ ಭೂಮಿಯಲ್ಲಿ ದೇವಾಲಯ ನಿರ್ಮಾಣ ಆರೋಪ.. ಮುಂದೇನಾಯ್ತು?

By

Published : Jul 5, 2022, 9:50 PM IST

Updated : Jul 6, 2022, 11:31 AM IST

ಮೂರ್ತಿಯೊಂದನ್ನು ಸ್ಥಾಪಿಸುವ ಮೂಲಕ ಸ್ಮಶಾನ ಭೂಮಿ ಅತಿಕ್ರಮಣಕ್ಕೆ ಯತ್ನಿಸಲಾಗುತ್ತಿದೆ ಎಂದು ಸಮುದಾಯವೊಂದರ ಜನ ಆರೋಪ ಮಾಡಿದ್ದಾರೆ.

section-144-imposed-in-agartalas-nandan-nagar-over-encroachment-of-graveyard-of-muslims
ಸ್ಮಶಾನ ಭೂಮಿಯಲ್ಲಿ ದೇವಾಲಯ ನಿರ್ಮಾಣ ಆರೋಪ

ಅಗರ್ತಲಾ (ತ್ರಿಪುರ): ಸ್ಮಶಾನ ಭೂಮಿಯಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಿರುವ ಆರೋಪ ತ್ರಿಪುರದ ಅಗರ್ತಲಾದಲ್ಲಿ ಕೇಳಿ ಬಂದಿದೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಅಗರ್ತಲಾ ಹೊರವಲಯದಲ್ಲಿರುವ ನಂದನ್ ನಗರ ಪ್ರದೇಶದ ಥಂಡಾ ಕಾಳಿ ಬರಿ ಪ್ರದೇಶದಲ್ಲಿ ಸಮುದಾಯವೊಂದು ಬಳಕೆ ಮಾಡುತ್ತಿದ್ದ ಸ್ಮಶಾನ ಇದೆ. ಆದರೆ, ಇಲ್ಲಿ ಇನ್ನೊಂದು ಸಮುದಾಯದ ಗುಂಪು ರಾತ್ರೋರಾತ್ರಿ ದೇವರನ್ನು ಸ್ಥಾಪಿಸಿದೆ ಎನ್ನಲಾಗಿದೆ. ಇದಕ್ಕೆ ಒಂದು ಸಮುದಾಯ ವಿರೋಧ ವ್ಯಕ್ತಪಡಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದೆ.

ಹಲವು ವರ್ಷಗಳಿಂದ ಈ ಸ್ಥಳ ಸ್ಮಶಾನಕ್ಕೆ ಸೇರಿದೆ. ಈ ಬಗ್ಗೆ ಅಧಿಕೃತವಾದ ದಾಖಲೆ ಮಾಡಿಕೊಂಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. 2019 ಮತ್ತು 2020ರ ಆಗಿನ ಅಲ್ಪಸಂಖ್ಯಾತ ಕಲ್ಯಾಣ ಸಚಿವ ರತನ್ ಲಾಲ್ ನಾಥ್ ಅವರಿಗೆ ಪತ್ರಗಳನ್ನು ಬರೆದು ಮನವಿ ಸಲ್ಲಿಸಿದ್ದೇವೆ. ಆಗ ನಮಗೆ ಮೌಖಿಕ ಭರವಸೆ ನೀಡಿದ್ದರು ಪ್ರತಿಭಟನಾನಿರತರು ಹೇಳಿದ್ದಾರೆ.

ಸ್ಥಳದಲ್ಲಿ ನೂರಾರು ಜನರು ಸೇರಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸದರ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ನಂದನ್​ ನಗರ ಪ್ರದೇಶದ ಸುತ್ತಮುತ್ತ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ನ್ಯೂಸ್​ ಚಾನೆಲ್​​ನ ಆ್ಯಂಕರ್​ ರೋಹಿತ್ ರಂಜನ್ ಅರೆಸ್ಟ್​

Last Updated : Jul 6, 2022, 11:31 AM IST

ABOUT THE AUTHOR

...view details