ಕರ್ನಾಟಕ

karnataka

ಪ್ರೀತಿಯ ಪತ್ನಿಗೆ ತಾಜ್​ಮಹಲ್ ಗಿಫ್ಟ್ ನೀಡಿದ ಮಧ್ಯಪ್ರದೇಶದ ನವ ಷಹಜಹಾನ್​

ಆಗ್ರಾದಲ್ಲಿ ನಿರ್ಮಾಣವಾಗಿರುವ ತಾಜ್​ಮಹಲ್ ಅನ್ನು ಮೊದಲು ಮಧ್ಯಪ್ರದೇಶ ಬುರ್ಹಾನ್​ಪುರದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.

By

Published : Nov 23, 2021, 10:32 AM IST

Published : Nov 23, 2021, 10:32 AM IST

Updated : Nov 23, 2021, 2:38 PM IST

burhanpur, MP: A man gifted a house in shape of TaJ Mahal to his wife
ತಾಜ್​ ಮಹಲ್ ಮನೆ

ಬುರ್ಹಾನ್ಪುರ್ (ಮಧ್ಯಪ್ರದೇಶ):ಮುಮ್ತಾಜ್ ಬೇಗಂ ಅವರ ಕೊನೆಯ ಆಸೆಯನ್ನು ಪೂರೈಸುವ ಸಲುವಾಗಿ ಮೊಘಲ್ ಚಕ್ರವರ್ತಿ ಷಹಜಹಾನ್ ಉತ್ತರ ಪ್ರದೇಶದ ಆಗ್ರಾದಲ್ಲಿ ವಿಶ್ವವಿಖ್ಯಾತ ತಾಜ್​ ಮಹಲ್ ಅನ್ನು ಕಟ್ಟಿಸಿದನು. ಇಲ್ಲೊಬ್ಬ ಮಧ್ಯಪ್ರದೇಶದ ಷಹಜಹಾನ್ ತನ್ನ ಪತ್ನಿಗೆ ತಾಜ್​ ಮಹಲ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ.

ದೂರದಿಂದ ಕಂಡ ತಾಜ್​ಮಹಲ್ ನಿವಾಸ

ಮಧ್ಯಪ್ರದೇಶದ ಬುರ್ಹಾನ್​ಪುರ ಜಿಲ್ಲೆಯಲ್ಲಿ ಶಿಕ್ಷಣ ತಜ್ಞನಾದ ಆನಂದ್ ಪ್ರಕಾಶ್ ಚೌಕ್ಸೆ ತನ್ನ ಪತ್ನಿ ಮಂಜುಷಾ ಚೌಕ್ಸೆಗೆ ಥೇಟ್ ತಾಜ್​ಮಹಲ್ ಅನ್ನು ಹೋಲುವ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದೂರದಿಂದ ಕಂಡ ತಾಜ್​ಮಹಲ್ ನಿವಾಸ

ನಾಲ್ಕು ಬೆಡ್ ರೂಮ್, ಗ್ರಂಥಾಲಯವೂ ಇದೆ..

ಸುಮಾರು 3 ವರ್ಷಗಳ ಅವಧಿಯಲ್ಲಿ ಈ ಮನೆ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ಮಹಡಿಗಳನ್ನು ಹೊಂದಿದೆ. ಕೆಳಮಹಡಿಯಲ್ಲಿ ಎರಡು ಮಲಗುವ ಕೋಣೆಗಳು ಮತ್ತು ಮೇಲಿನ ಮಹಡಿಯಲ್ಲಿ ಎರಡು ಮಲಗುವ ಕೋಣೆಗಳಿವೆ. ಅಷ್ಟೇ ಅಲ್ಲದೇ ವಿಶಾಲವಾದ ಹಾಲ್, ಅಡುಗೆ ಮನೆಯನ್ನು ಈ ಮನೆ ಹೊಂದಿದೆ.

ತಾಜ್​ ಮಹಲ್​​ ಒಳವಿನ್ಯಾಸ

ಇದಕ್ಕಿಂತ ವಿಶೇಷವಾಗಿ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿಗಳೂ ಈ ಮನೆಯಲ್ಲಿವೆ. ಒಮ್ಮೆ ತಾಜ್​ ಮಹಲ್ ನೋಡಲು ತೆರಳಿದ್ದ ಪ್ರಕಾಶ್​ ಚೌಕ್ಸೆ ದಂಪತಿ ತಾಜ್ ಮಹಲ್ ರೀತಿಯ ಮನೆ ನಿರ್ಮಾಣ ಮಾಡಬೇಕೆಂದು ನಿರ್ಧಾರ ಮಾಡಿ, ನನ್ನನ್ನು ಭೇಟಿಯಾದರು ಎಂದು ಮನೆ ನಿರ್ಮಿಸಿದ ಇಂಜಿನಿಯರ್ ಪ್ರವೀಣ್ ಚೌಕ್ಸೆ ಹೇಳಿದ್ದಾರೆ.

ಸುಂದರವಾದ ಒಳಾಂಗಣ

ನಂತರ ಪ್ರವೀಣ್ ಚೌಕ್ಸೆ ಕೂಡಾ ಆಗ್ರಾಗೆ ತೆರಳಿ, ಅಧ್ಯಯನ ನಡೆಸಿ ಬುರ್ಹಾನ್​ಪುರದಲ್ಲಿ ತಾಜ್ ಮಹಲ್ ನಿರ್ಮಾಣ ಮಾಡಿದ್ದಾರೆ. ಮನೆಗೆ ನಿರ್ಮಿಸಲಾಗಿರುವ ಮಿನಾರ್​ಗಳೂ ಸೇರಿದಂತೆ ಮನೆಯ ವಿಸ್ತೀರ್ಣ 90x90 ಅಡಿ ಇದ್ದು, ಮಿನಾರ್​ಗಳು ಹೊರತುಪಡಿಸಿ 60x60 ಅಡಿಗಳಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. 29 ಅಡಿ ಎತ್ತರದಲ್ಲಿ ಗುಮ್ಮಟ ನಿರ್ಮಾಣ ಮಾಡಲಾಗಿದೆ.

ಮಧ್ಯಪ್ರದೇಶದಲ್ಲಿನ 'ತಾಜ್​ಮಹಲ್​'

ಬುರ್ಹಾನ್​ಪುರದಲ್ಲೇ ನಿರ್ಮಾಣವಾಗಬೇಕಿತ್ತಂತೆ ತಾಜ್​ಮಹಲ್!

ಮೊಘಲ್ ದೊರೆ ಷಹಜಹಾನ್ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಾಣ ಮಾಡಿದ್ದು, ಮೊದಲಿಗೆ ಬುರ್ಹಾನ್​ಪುರದ ತಪತಿ ನದಿಯ ದಡದಲ್ಲೇ ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಲಾಗಿತ್ತಂತೆ. ಏಕೆಂದರೆ ಮಮ್ತಾಜ್ ತನ್ನ ನಾಲ್ಕನೇ ಮಗುವಿಗೆ ಜನ್ಮ ನೀಡುವಾಗ ಇದೇ ಸ್ಥಳದಲ್ಲಿಯೇ ಮೃತಪಟ್ಟಿದ್ದಳು ಎಂದು ಇತಿಹಾಸಕಾರರಲ್ಲಿ ಕೆಲವರು ಹೇಳುವ ಮಾತು. ಆದರೆ ಕೆಲವು ಕಾರಣಗಳಿಂದಾಗಿ ಬುರ್ಹಾನ್​ಪುರದಲ್ಲಿ ತಾಜ್ ಮಹಲ್ ನಿರ್ಮಾಣ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:India Covid Report: ಒಂದೂವರೆ ವರ್ಷದ ಬಳಿಕ ಭಾರತದಲ್ಲಿ ಅತಿ ಕಡಿಮೆ ಸೋಂಕಿತರು ಪತ್ತೆ

Last Updated : Nov 23, 2021, 2:38 PM IST

ABOUT THE AUTHOR

...view details