ಕರ್ನಾಟಕ

karnataka

ETV Bharat / bharat

ನಾಳೆಯಿಂದ 2ನೇ ಸುತ್ತಿನ ಸಂಸತ್​ ಬಜೆಟ್ ಅಧಿವೇಶನ ಆರಂಭ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನಾಳೆಯಿಂದ 2ನೇ ಸುತ್ತಿನ ಸಂಸತ್ತಿನ ಬಜೆಟ್ ಅಧಿವೇಶನ ಶುರುವಾಗಲಿದ್ದು, ಏಪ್ರಿಲ್ 8ಕ್ಕೆ ಮುಕ್ತಾಯಗೊಳ್ಳಲಿದೆ.

Second part of Parliament's Budget Session to commence from Monday
ನಾಳೆಯಿಂದ 2ನೇ ಸುತ್ತಿನ ಸಂಸತ್​ ಬಜೆಟ್ ಅಧಿವೇಶನ ಆರಂಭ

By

Published : Mar 7, 2021, 3:32 PM IST

ನವದೆಹಲಿ: ಕೋವಿಡ್​ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸೋಮವಾರದಿಂದ ಎರಡನೇ ಸುತ್ತಿನ ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ.

ಜನವರಿ 29 ರಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಆರಂಭವಾಗಿದ್ದ ಮೊದಲ ಹಂತದ ಬಜೆಟ್ ಅಧಿವೇಶನ ಫೆಬ್ರವರಿ 29 ರಂದು ಮುಕ್ತಾಯಗೊಂಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1 ರಂದು ಸಂಸತ್ತಿನಲ್ಲಿ 2021-2022ನೇ ಸಾಲಿನ ಕೇಂದ್ರ ಬಜೆಟ್​ ಮಂಡಿಸಿದ್ದರು.

ನಾಳೆಯಿಂದ 2ನೇ ಸುತ್ತಿನ ಅಧಿವೇಶನ ಶುರುವಾಗಲಿದ್ದು, ಏಪ್ರಿಲ್ 8ಕ್ಕೆ ಮುಕ್ತಾಯಗೊಳ್ಳಲಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ರಾಜ್ಯಸಭಾ ಹಾಗೂ ಸಂಜೆ 4 ರಿಂದ ರಾತ್ರಿ 10 ರವರೆಗೆ ಲೋಕಸಭಾ ಕಲಾಪ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಏ.​ 9 ರಿಂದ ಮೇ30ರ ವರೆಗೆ ಐಪಿಎಲ್​​: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್​ ಫೈಟ್​​

ಮೊದಲ ಸುತ್ತಿನಲ್ಲಿ ನಿಗದಿತ 50 ಗಂಟೆಗಳ ಪೈಕಿ 49 ಗಂಟೆ 17 ನಿಮಿಷಗಳ ಕಾಲ ಲೋಕಸಭಾ ಕಲಾಪ ಜರುಗಿತ್ತು. ಕೇಂದ್ರ ಬಜೆಟ್ ಕುರಿತು ಚರ್ಚಿಸಲು 10 ಗಂಟೆಗಳ ಕಾಲಾವಧಿ ನೀಡಲಾಗಿತ್ತು. ಆದರೆ 14 ಗಂಟೆ 40 ನಿಮಿಷಗಳ ಕಾಲ ಚರ್ಚಿಸಲಾಗಿತ್ತು. ಬಜೆಟ್​ ಹೊರತಾಗಿ ರೈತರ ಪ್ರತಿಭಟನೆ, ಕೋವಿಡ್​ ಬಿಕ್ಕಟ್ಟು, ಭಾರತ-ಚೀನಾ ಗಡಿ ವಿಚಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಉಭಯ ಸದನಗಳ ಸಂಸದರು ಚರ್ಚೆ ನಡೆಸಿದ್ದರು,

ABOUT THE AUTHOR

...view details