ಝಲಾವರ್:ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ಝಲಾವರ್ ಕ್ರೀಡಾ ಸಂಕೀರ್ಣದಿಂದ ಪ್ರಾರಂಭವಾಯಿತು. ದಿಯೋರಿ ಘಾಟಾ ಮೂಲಕ 17 ಕಿ.ಮೀ ಕ್ರಮಿಸಿ ಮೋರು ಕಲಾ ಕ್ರೀಡಾಂಗಣದಲ್ಲಿ ಇಂದು ಯಾತ್ರೆ ಕೊನೆಗೊಳ್ಳಲಿದೆ. ಯಾತ್ರೆಯು ಬಿಜೆಪಿ ಸಂಸದ ದುಷ್ಯಂತ್ ಸಿಂಗ್ ಅವರ ಕಚೇರಿ ಎದುರು ಸಾಗಿತು, ಈ ವೇಳೆ, ನಿಂತಿದ್ದ ಬಿಜೆಪಿ ಕಾರ್ಯಕರ್ತರ ಕಡೆ ಕೈ ಬೀಸಿ ಫ್ಲೈಯಿಂಗ್ ಕಿಸ್ ಕೊಟ್ಟರು. ರಾಹುಲ್ ಗಾಂಧಿ ಜೊತೆಗೆ ಸಚಿನ್ ಪೈಲಟ್ ಮತ್ತು ರಾಮಲಾಲ್ ಜಾಟ್ ಹಜ್ಜೆ ಹಾಕಿದರು.
ಬಿಜೆಪಿ ಕಾರ್ಯಕರ್ತರಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ! - ETV Bharath Kannada
ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರೆದಿದೆ. ರಾಹುಲ್ ಗಾಂಧಿ ಜೊತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಹೆಜ್ಜೆ ಹಾಕಿದರು.
ಭಾರತ್ ಜೋಡೋ ಯಾತ್ರೆ
ಪೈಲಟ್ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ:ಭಾರತ್ ಜೋಡೋ ಯಾತ್ರೆಯ ಎರಡನೇ ದಿನ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರ, ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಂದೀಪ್ ಇದ್ದರು. ಬೆಳಗಿನ ಪ್ರಯಾಣದ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ರಾಹುಲ್ ಗಾಂಧಿ ಹಾಗೂ ಸಚಿನ್ ಪೈಲಟ್ ಚರ್ಚೆ ಮಾಡಿದರು.
ಇದನ್ನೂ ಓದಿ:ರಾಜಸ್ಥಾನದಲ್ಲಿ ಭಾರತ್ ಜೋಡೋ ನಡಿಗೆ: ಮಕ್ಕಳೊಂದಿಗೆ ಸಂವಾದ ಮಾಡಿದ ರಾಹುಲ್ ಗಾಂಧಿ