ಕರ್ನಾಟಕ

karnataka

ETV Bharat / bharat

ಫ್ರಾನ್ಸ್​ನಿಂದ ಭಾರತದವರೆಗೆ ತಡೆ ರಹಿತ ಹಾರಾಟ: ಭಾರತಕ್ಕೆ ಬಂದಿಳಿದ ರಫೇಲ್​​ ಯುದ್ಧ ವಿಮಾನಗಳು! - ರಷ್ಯಾದಿಂದ ಆಗಮಿಸಿದ ರಫೇಲ್​ ಜೆಟ್​

ಭಾರತಕ್ಕೆ ಇದೀಗ ಮತ್ತೊಂದು ಬ್ಯಾಚ್​ನ ರಫೇಲ್​ ಯುದ್ಧ ವಿಮಾನಗಳು ಆಗಮಿಸಿದ್ದು, ಇದರಿಂದ ವಾಯುಸೇನೆಗೆ ಮತ್ತಷ್ಟು ಬಲ ಬಂದಿದೆ.

Rafale jets
Rafale jets

By

Published : Nov 4, 2020, 9:55 PM IST

Updated : Nov 4, 2020, 10:53 PM IST

ನವದೆಹಲಿ:ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಈಗಾಗಲೇ ಫ್ರಾನ್ಸ್​​ನಿಂದ ಮೊದಲ ಬ್ಯಾಚ್​ನ ಐದು ರಫೇಲ್​ ಜೆಟ್​ಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬ್ಯಾಚ್​ನ ಯುದ್ಧ ವಿಮಾನಗಳು ಬಂದಿಳಿದಿವೆ. ಇದಕ್ಕೆ ಸಂಬಂಧಿಸಿದಂತೆ ಇಂಡಿಯನ್​ ಏರ್​ಪೋರ್ಸ್​ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ಮೂರು ಯುದ್ಧ ವಿಮಾನಗಳು ಫ್ರಾನ್ಸ್​ನಿಂಧ ತಡೆರಹಿತವಾಗಿ ಭಾರತದವರೆಗೆ ಹಾರಾಟ ನಡೆಸಿ, ರಾತ್ರಿ 8:14ಕ್ಕೆ ಬಂದಿಳಿದಿವೆ. ಫ್ರಾನ್ಸ್​​ನೊಂದಿಗೆ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್​ ವಿಮಾನಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, 2023ರವೇಳಗೆ ಈ ಎಲ್ಲ ಯುದ್ಧ ವಿಮಾನಗಳು ಭಾರತದ ಬತ್ತಳಿಕೆ ಸೇರಿಕೊಳ್ಳಲಿವೆ.

ಭಾರತಕ್ಕೆ ಬಂದಿಳಿದ ರಫೇಲ್​​ ಯುದ್ಧ ವಿಮಾನಗಳು

ನವೆಂಬರ್​ ​ಮೊದಲ ವಾರದಲ್ಲಿ ಮತ್ತೆ 3 - 4 ರಫೇಲ್​​​​​​​​ ಜೆಟ್​​​ ಭಾರತಕ್ಕೆ!

ಗುಜರಾತ್​ನ ಜಾಮ್​ನಗರ ವಾಯುನೆಲೆಗೆ ಇವು ಬಂದು ಇಳಿದಿವೆ ಎಂದು ಹೇಳಲಾಗುತ್ತಿದ್ದು, ನಾಳೆ ಹರಿಯಾಣದ ಅಂಬಾಲಾ ವಾಯುನೆಲೆಗೆ ಸೇರಿಕೊಳ್ಳಲಿವೆ. ತದನಂತರ ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರ ಮಾಡುವ ಕಾರ್ಯ ನಡೆಯಲಿದೆ. ಫ್ರಾನ್ಸಿನ ಡಸಾಲ್ಟ್ ಸಂಸ್ಥೆಯಿಂದ 2016ರಲ್ಲಿ 59 ಸಾವಿರ ಕೋಟಿ ರೂ.ಗಳಿಗೆ 36 ಯುದ್ಧ ವಿಮಾನ ಖರೀದಿ ಮಾಡಿತ್ತು. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿತ್ತು.

ಮೊದಲ ಬ್ಯಾಚ್​ನ ಯುದ್ಧ ವಿಮಾನಗಳನ್ನ ಈಗಾಗಲೇ ಲಡಾಖ್​​ನಲ್ಲಿ ನಿಯೋಜನೆ ಮಾಡಲಾಗಿದೆ. ಮೊದಲನೇ ಹಂತದ 10 ರಫೇಲ್​ಗಳ ಪೈಕಿ 5 ವಿಮಾನಗಳು ಫ್ರಾನ್ಸ್​​ನಲ್ಲಿದ್ದು, ಅಲ್ಲೇ ಭಾರತೀಯ ಪೈಲಟ್​ಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್​ ವೇಳೆಗೆ ಅವರ ತರಬೇತಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

Last Updated : Nov 4, 2020, 10:53 PM IST

ABOUT THE AUTHOR

...view details