ಕರ್ನಾಟಕ

karnataka

ETV Bharat / bharat

ಕೋವಿಡ್​ ಬಗ್ಗೆ ನಿರ್ಲಕ್ಷ್ಯ.. ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತ, ಕುಳಿತ ಚೇರ್​ಲ್ಲೇ​ ಪ್ರಾಣಬಿಟ್ಟ ಅಧಿಕಾರಿ! - ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಕುಳಿತ ಚೇರ್​ ಮೇಲೆ ಪ್ರಾಣಬಿಟ್ಟ ಅಧಿಕಾರಿ

ದೇಶಾದ್ಯಂತ ಕೋವಿಡ್​ ಸಂಖ್ಯೆ ಜೊತೆ ಕೋವಿಡ್​ ಮೃತರ ಸಂಖ್ಯಯೂ ಹೆಚ್ಚಾಗುತ್ತಿದೆ. ಅಷ್ಟೆ ಅಲ್ಲದೇ ಆಕ್ಸಿಜನ್​ ಕೊರೆತೆಯೂ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಸರ್ಕಾರ ಕೋವಿಡ್ ಬಗ್ಗೆ ಸಾಧ್ಯವಾದಷ್ಟು ಜಾಗೃತಿ ಮೂಡಿಸುತ್ತಿದೆ. ಆದ್ರೆ ಕೆಲವರು ಕೋವಿಡ್​ ನಿರ್ಲಕ್ಷ್ಯಿಸಿ ತಮ್ಮ ಸಾವನ್ನು ತಾವೇ ತಂದುಕೊಳ್ಳುತ್ತಿದ್ದಾರೆ. ಇಂತಹದೊಂದು ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಕಂಡು ಬಂದಿದೆ.

Andhra Govt Employee Covid  East Godavari district  Covid-19 pandemic in Andhra Pradesh  Employee in office succumbs to Covid  ಕುಳಿತ ಚೇರ್​ ಮೇಲೆ ಪ್ರಾಣಬಿಟ್ಟ ಅಧಿಕಾರಿ  ಕಾಕಿನಾಡದಲ್ಲಿ ಕುಳಿತ ಚೇರ್​ ಮೇಲೆ ಪ್ರಾಣಬಿಟ್ಟ ಅಧಿಕಾರಿ  ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಕುಳಿತ ಚೇರ್​ ಮೇಲೆ ಪ್ರಾಣಬಿಟ್ಟ ಅಧಿಕಾರಿ  ಪಶ್ಮಿಮ ಗೋದಾವರಿ ಕೊರೊನಾ ಸುದ್ದಿ
ಕುಳಿತ ಚೇರ್​ ಮೇಲೆ ಪ್ರಾಣಬಿಟ್ಟ ಅಧಿಕಾರಿ

By

Published : May 1, 2021, 10:13 AM IST

Updated : May 1, 2021, 12:41 PM IST

ಪಶ್ಚಿಮ ಗೋದಾವರಿ(ಆಂಧ್ರ ಪ್ರದೇಶ):ಕೆಲಸಕ್ಕೆ ಬಂದು ಕುರ್ಚಿ ಮೇಲೆ ಕುಳಿತ ಸ್ವಲ್ಪ ಸಮಯದ್ಲೇ ಅಧಿಕಾರಿಯೊಬ್ಬರು ಕೊರೊನಾದಿಂದ ಪ್ರಾಣಬಿಟ್ಟಿರುವ ಘಟನೆ ಜಿಲ್ಲೆಯ ಕಾಕಿನಾಡದಲ್ಲಿ ಕಂಡು ಬಂದಿದೆ.

ಗಂಡೇಪಲ್ಲೆ ತಾಲೂಕಿನ ಮಲ್ಲೆಪಲ್ಲೆ ಗ್ರಾಮದಲ್ಲಿ ಗ್ರಾಮ ಪಂಚಾಯತ್​ ಕಾರ್ಯದರ್ಶಿಯಾಗಿ ಜಯಶಂಕರ್​ ನಾರಾಯಣ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಸಾಮಾನ್ಯ ಜ್ವರವೆಂದು ನಿರ್ಲಕ್ಷ್ಯ ವಹಿಸಿ ನಿತ್ಯ ಕೆಲಸಕ್ಕೆ ಬರುತ್ತಿದ್ದರು.

ಕುಳಿತಲ್ಲೇ ಚೇರ್​ ಮೇಲೆ ಪ್ರಾಣಬಿಟ್ಟ ಅಧಿಕಾರಿ

ಶುಕ್ರವಾರ ಸಹ ಜಯಶಂಕರ್​ ಕೆಲಸಕ್ಕೆ ಬಂದಿದ್ದು, ಕೆಲಸ ಮಾಡಲು ಕುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಉಸಿರಾಟದ ಸಮಸ್ಯೆಯಿಂದ ಹೆಚ್ಚಾಗಿ ಕುಳಿತ ಕುರ್ಚಿ ಮೇಲೆಯೇ ಪ್ರಾಣಬಿಟ್ಟಿದ್ದಾರೆ.

ಇದನ್ನು ನೋಡಿದ ಸಹೋದ್ಯೋಗಿಗಳು ಜಯಶಂಕರ್​ ಹತ್ತಿರ ಸುಳಿಯಲು ಹೆದರಿದರು. ಬಳಿಕ ವೈದ್ಯರಿಗೆ ಕರೆ ಮಾಡಿ ತಿಳಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜಯಶಂಕರ್​ಗೆ ಕೋವಿಡ್ ಪರೀಕ್ಷೆ ಮಾಡಿದರು. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

Last Updated : May 1, 2021, 12:41 PM IST

ABOUT THE AUTHOR

...view details