ತೇಜ್‌ಪುರ್:ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಫಾರ್ವರ್ಡ್ ಪೋಸ್ಟ್‌ನಲ್ಲಿ ಕಾವಲಿಗಿದ್ದ ಇಬ್ಬರು ಯೋಧರು ನಾಪತ್ತೆಯಾಗಿ 15 ದಿನ ಕಳೆದರೂ ಅವರ ಸುಳಿವು ಸಿಕ್ಕಿಲ್ಲ. ಕಣ್ಮರೆಯಾದ ಸೈನಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ನಾಯಕ್ ಪ್ರಕಾಶ್ ಸಿಂಗ್ ಮತ್ತು ಲ್ಯಾನ್ಸ್ ನಾಯಕ್ ಹರೇಂದರ್ ಸಿಂಗ್ ಕಣ್ಮರೆಯಾದವರು. ಇಬ್ಬರನ್ನೂ ಅರುಣಾಚಲ ಪ್ರದೇಶದ ಅಂಜಾವ್ನ ಫಾರ್ವರ್ಡ್ ಪೋಸ್ಟ್‌ನಲ್ಲಿ ಕಾವಲಿಗೆ ನಿಯೋಜಿಸಲಾಗಿತ್ತು.
ಪ್ರಕಾಶ್ ಸಿಂಗ್ ಮತ್ತು ಹರೇಂದರ್ ಸಿಂಗ್ರನ್ನು ಅರುಣಾಚಲ ಪ್ರದೇಶದ ಫಾರ್ವರ್ಡ್ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ಗಸ್ತಿನ ವೇಳೆ ಪೋಸ್ಟ್ ಸಮೀಪದಲ್ಲಿ ವೇಗವಾಗಿ ಹರಿಯುವ ನದಿಗೆ ಆಕಸ್ಮಿಕವಾಗಿ ಬಿದ್ದಿರಬೇಕು ಎಂದು ತೇಜ್‌ಪುರ್ ಲೆಫ್ಟಿನೆಂಟ್ ಕರ್ನಲ್ ಅಮರಿಂದರ್ ಸಿಂಗ್ ವಾಲಿಯಾ ತಿಳಿಸಿದ್ದಾರೆ.