ಪೂರ್ವ ಗೋದಾವರಿ(ಆಂಧ್ರಪ್ರದೇಶ): ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ರಾಮ ಮಂದಿರದ ಹೊರಗೆ ಅನ್ಯಕೋಮಿನವರು ಪ್ರಾರ್ಥನೆ ನಡೆಸಿದ್ದು, ಪ್ರಾರ್ಥನೆಯ ನಂತರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಮಾರ್ಚ್ 30ರಂದು ನಡೆದಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾದ್ರಿ ಮತ್ತು ಮಹಿಳೆಯೊಬ್ಬರು ಶ್ರೀರಾಮ ದೇವಾಲಯದ ಮುಂಭಾಗದಲ್ಲಿಯೇ ಪ್ರಾರ್ಥನೆಗಳನ್ನು ಆಯೋಜಿಸಿದ್ದರು. ದೇವಾಲಯದ ಮುಂಭಾಗ ಪ್ರಾರ್ಥನೆಗೆ ಆಕ್ಷೇಪಿಸಿದ ಇಬ್ಬರನ್ನು ಪೊಲೀಸರು ಹೊರ ಕಳುಹಿಸಿದ್ದರು. ದೇವಾಲಯವನ್ನು ಅನ್ಯಕೋಮಿನವರು ಆಕ್ರಮಿಸಿಕೊಂಡಿದ್ದಾರೆ ಮತ್ತು ಅಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ ಎಂದು ಬಿಜೆಪಿ ಆರೋಪಿದೆ ಎಂದು ಪೂರ್ವ ಗೋದಾವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ರವೀಂದ್ರನಾಥ್ ಬಾಬು ಮಾಹಿತಿ ನೀಡಿದ್ದಾರೆ.