ಕರ್ನಾಟಕ

karnataka

ETV Bharat / bharat

ರೈಲ್ವೆ, ವಿಮಾನ ನಿಲ್ದಾಣಗಳ ಖಾಸಗೀಕರಣದ ಬಳಿಕ ಕೇಂದ್ರದ ದೃಷ್ಟಿ ರೈತರ ಜಮೀನಿನತ್ತ: ಭೂಪೇಶ್ ಬಾಗೆಲ್ - ongoing agitation by farmers outside Delhi

ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ಖಾಸಗೀಕರಣದ ನಂತರ ಎನ್‌ಡಿಎ ಸರ್ಕಾರ ಈಗ ರೈತರ ಜಮೀನಿನತ್ತ ತನ್ನ ದೃಷ್ಟಿ ಹಾಯಿಸಿದೆ ಎಂದು ಛತ್ತೀಸ್​ಗಢ ಸಿಎಂ ಭೂಪೇಶ್ ಬಾಗೆಲ್ ಆರೋಪಿಸಿದ್ದಾರೆ.

Baghel
ಭೂಪೇಶ್ ಬಾಗೆಲ್

By

Published : Jan 15, 2021, 1:25 PM IST

ವಾರ್ಧಾ (ಮಹಾರಾಷ್ಟ್ರ):ದೆಹಲಿಯ ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕೊನೆಗೊಳಿಸಲು ಹೊಸ ಕೃಷಿ ಕಾನೂನುಗಳನ್ನು ತೆಗೆದುಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಆಗ್ರಹಿಸಿದ್ದಾರೆ.

ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ಖಾಸಗೀಕರಣದ ನಂತರ ಎನ್‌ಡಿಎ ಸರ್ಕಾರ ಈಗ ರೈತರ ಜಮೀನಿನತ್ತ ತನ್ನ ದೃಷ್ಟಿ ಹಾಯಿಸಿದೆ. ಆದರೆ, ರೈತರಿಗೆ ಇವೆಲ್ಲವನ್ನೂ ಅರ್ಥಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಒಂದೂವರೆ ತಿಂಗಳಿನಿಂದ ಪಟ್ಟುಬಿಡದೆ ಧರಣಿ ನಡೆಸುತ್ತಿದ್ದಾರೆ. ಇದನ್ನು ಸುಪ್ರೀಂಕೋರ್ಟ್ ಕೂಡ ಗಮನಿಸಿದೆ ಎಂದು ಭೂಪೇಶ್ ಬಾಗೆಲ್ ಹೇಳಿದರು.

ಮಾಧ್ಯಮಗಳೊಂದಿಗೆ ಛತ್ತೀಸ್​ಗಢ ಸಿಎಂ ಭೂಪೇಶ್ ಬಾಗೆಲ್

ಇದನ್ನೂ ಓದಿ: ಸಿಡಿ ಇದ್ರೆ ಬಿಡುಗಡೆ ಮಾಡಲಿ.. ಯೋಗೇಶ್ವರಗೆ ಸಾಲ ನೀಡಿಲ್ಲ; ಸಚಿವ ಎಂಟಿಬಿ ನಾಗರಾಜ್

ಮಹಾರಾಷ್ಟ್ರದ ವಾರ್ಧಾದಲ್ಲಿನ ಗಾಂಧಿ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪದಾಧಿಕಾರಿಗಳ ಶಿಬಿರದಲ್ಲಿ ಭೂಪೇಶ್ ಬಾಗೆಲ್ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಹಿಂಸೆ, ಶಾಂತಿ, ಸಮಾನತೆ ಮತ್ತು ಅಸ್ಪೃಶ್ಯತೆಯ ನಿರ್ಮೂಲನೆ ಕುರಿತು ಮಹಾತ್ಮ ಗಾಂಧಿಯವರ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಹೊಸ ಶಕ್ತಿಯನ್ನು ಸೃಷ್ಟಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಹೇಳಿದರು.

ABOUT THE AUTHOR

...view details