ಕರ್ನಾಟಕ

karnataka

ETV Bharat / bharat

ವೃಶ್ಚಿಕ ರಾಶಿಯವರಿಗೆ ಈ ವರ್ಷದಲ್ಲಿ ಸಾಕಷ್ಟು ಹಣ ಹರಿದು ಬರಲಿದೆ; ಆದರೆ! - Scorpio Horoscope 2022

ಹೊಸ ವರ್ಷದ ನಿಮ್ಮ ರಾಶಿ ಭವಿಷ್ಯ: ಕೈ ಹಿಡಿಯಲಿರುವ ನಿಮ್ಮ ವ್ಯವಹಾರ, ಕೂಡಿಬರುವ ಕಂಕಣ ಭಾಗ್ಯ, ಹಣಕಾಸಿನ ಸ್ಥಿತಿ-ಗತಿ, ವಿದೇಶ ಪ್ರಯಾಣ.. ಇಲ್ಲಿವೆ ಉಪಯುಕ್ತ ಸಲಹೆ-ಸೂಚನೆಗಳು..

Etv Bharat 2022 Horoscope
Etv Bharat 2022 Horoscope

By

Published : Dec 31, 2021, 8:10 PM IST

ವೃಶ್ಚಿಕ ರಾಶಿಯವರು 2022ರ ಆರಂಭದಲ್ಲಿ ಸಾಕಷ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಇಡಲಿದ್ದಾರೆ. ಎಲ್ಲವನ್ನೂ ನೀವಾಗಿಯೇ ಮಾಡಲು ಇಷ್ಟಪಡುವಿರಿ. ಈ ಕಾರಣದಿಂದಾಗಿ ನಿಮ್ಮ ದಕ್ಷತೆ ಮತ್ತು ನಾಯಕತ್ವ ಗುಣವು ಇತರರ ಗಮನಕ್ಕೆ ಬರಲಿದೆ. ಜನರೆದುರು ನೀವು ಸಾಕಷ್ಟು ಪ್ರಖ್ಯಾತಿ ಗಳಿಸಲಿದ್ದೀರಿ.

ನಿಮ್ಮ ಕೆಲಸದ ಮೇಲೆ ನೀವು ಹಿಡಿತ ಸಾಧಿಸಲಿದ್ದೀರಿ. ಅಲ್ಲದೆ ದಿನ ಕಳೆದಂತೆ ನಿಮ್ಮ ದಕ್ಷತೆಯು ವೃದ್ಧಿಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವರ್ಷವು ಅನುಕೂಲಕರ. ಏಪ್ರಿಲ್‌ ನಂತರ ಉಂಟಾಗುವ ಗುರುವಿನ ಸಂಕ್ರಮಣವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳು ಉತ್ತಮ ಕಾಲೇಜಿಗೆ ಪ್ರವೇಶ ಪಡೆಯಲಿದ್ದಾರೆ. ಈ ವರ್ಷದಲ್ಲಿ ನೀವು ಹಣಕಾಸಿನ ಕುರಿತು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಈ ವರ್ಷದಲ್ಲಿ ಸಾಕಷ್ಟು ಹಣ ನಿಮಗೆ ಹರಿದು ಬರಲಿದೆ.

ವರ್ಷದ ಕೊನೆಯ ತಿಂಗಳುಗಳಲ್ಲಿ ನಿಮ್ಮ ಖರ್ಚುವೆಚ್ಚಗಳ ಕುರಿತು ನೀವು ಗಮನ ಹರಿಸಬೇಕಾಗುತ್ತದೆ. ಈ ವರ್ಷ ನೀವು ನಿಮ್ಮ ಮಿತ್ರರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಬೇಕು. ಅವರು ದೊಡ್ಡ ಮಟ್ಟದಲ್ಲಿ ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ವರ್ಷದ ಮಧ್ಯ ಭಾಗದಲ್ಲಿ ಈ ರಾಶಿಯವರು ವಿದೇಶಕ್ಕೆ ಹೋಗಲು ಅವಕಾಶ ಪಡೆಯಲಿದ್ದಾರೆ. ಈ ದಿಸೆಯಲ್ಲಿ ಈಗಾಗಲೇ ಪ್ರಯತ್ನಿಸುವವರು ಬೇಗನೇ ಯಶಸ್ಸು ಗಳಿಸಲಿದ್ದಾರೆ. ಈ ವರ್ಷದಲ್ಲಿ ಸ್ವಲ್ಪ ನಿಧಾನ ಗತಿಯಲ್ಲಿ ನೀವು ಆಸ್ತಿಯನ್ನು ಖರೀದಿಸಲು ಯತ್ನಿಸಲಿದ್ದೀರಿ. ಮೇ ಮತ್ತು ಅಕ್ಟೋಬರ್‌ ನಡುವೆ ನಿಮ್ಮ ತಾಯಿ ಮತ್ತು ತಂದೆಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ.

ಕೇತುವು ಈ ವರ್ಷದಲ್ಲಿ ನಿಮ್ಮ ರಾಶಿಚಕ್ರದಿಂದ ಹೊರಹೋಗಲಿದ್ದಾನೆ. ನಿಮ್ಮನ್ನು ಕೆಲ ಕಾಲದಿಂದ ಕಾಡುತ್ತಿದ್ದ ಮಾನಸಿಕ ಸಮಸ್ಯೆಗಳು ಈಗ ದೂರವಾಗಲಿವೆ. ಜುಲೈ ನಂತರ ನೀವು ಬದುಕನ್ನು ಹೊಸ ಹುರುಪಿನೊಂದಿಗೆ ಸಾಗಿಸಲಿದ್ದೀರಿ. ಈ ವರ್ಷದಲ್ಲಿ ನೀವು ನಿಮ್ಮ ಯೋಜನೆಗಳನ್ನು ಗೌಪ್ಯವಾಗಿಡಬೇಕು. ಮೇ ನಂತರ ವಿದೇಶಕ್ಕೆ ಹೋಗುವವರಿಗೆ ಸಕಾಲ. ಅಲ್ಲದೆ ಕೆಲಸದ ವರ್ಗಾವಣೆ ಮತ್ತು ಕೆಲಸದ ಬದಲಾವಣೆಯ ವಿಚಾರದಲ್ಲಿ ನೀವು ಈ ವರ್ಷದಲ್ಲಿ ಅವಕಾಶ ಪಡೆಯಲಿದ್ದೀರಿ. ಸರಿಯಾದ ಅವಕಾಶವನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಲು ಮರೆಯಬೇಡಿ. ಈ ಮೂಲಕ ನೀವು ಪ್ರಗತಿ ಸಾಧಿಸಬಹುದು. ಯಾವುದಾದರೂ ಒಳ್ಳೆಯ ಸ್ಥಳದಲ್ಲಿ ನಿಮ್ಮ ಹಣವನ್ನು ನೀವು ಹೂಡಿಕೆ ಮಾಡುವುದು ಒಳ್ಳೆಯದು. ಇದು ಮುಂದಿನ ವರ್ಷದಲ್ಲಿ ನಿಮ್ಮ ನೆರವಿಗೆ ಬರಲಿದೆ.

ಇದನ್ನೂ ಓದಿ: Horoscope 2022: ಈ ರಾಶಿಯವರಿಗೆ ಹೊಸ ವರ್ಷ ತಂದುಕೊಡಲಿದೆ ಬಹುದೊಡ್ಡ ಬದಲಾವಣೆ

ABOUT THE AUTHOR

...view details