ಕರ್ನಾಟಕ

karnataka

ಹಿಂದಕ್ಕೆ ತೆಗೆಯುವಂತೆ ಹೇಳಿದ್ದೇ ತಪ್ಪಾ? ಸಚಿವರ ಕಾರಿಗೆ ವೇಗವಾಗಿ ಗುದ್ದಿದ ಸ್ಕಾರ್ಪಿಯೋ ಚಾಲಕ!

By

Published : Dec 25, 2022, 9:23 PM IST

ಬಿಹಾರದ ಸಚಿವ ತೇಜ್ ಪ್ರತಾಪ್ ಯಾದವ್ ಕಾರಿಗೆ ಡಿಕ್ಕಿ - ಕುಡಿತ ಮತ್ತಿನಲ್ಲಿದ್ದ ಚಾಲಕನ ಎಡವಟ್ಟು - ಚಾಲಕ ಸೇರಿ ಇಬ್ಬರನ್ನು ಹಿಡಿದು ಥಳಿಸಿದ ಜನ

scorpio-hit-bihar-minister-tej-pratap-yadav-car-in-patna
ಹಿಂದಕ್ಕೆ ತೆಗೆಯುವಂತೆ ಹೇಳಿದ್ದೇ ತಪ್ಪು: ಸಚಿವರ ಕಾರಿಗೆ ವೇಗವಾಗಿ ಗುದ್ದಿದ ಸ್ಕಾರ್ಪಿಯೋ ಚಾಲಕ

ಪಾಟ್ನಾ (ಬಿಹಾರ): ಬಿಹಾರದ ಸಚಿವ ತೇಜ್ ಪ್ರತಾಪ್ ಯಾದವ್ ಅವರ ಕಾರಿಗೆ ಮತ್ತೊಂದು ಕಾರಿನಿಂದ ಗುದ್ದಿರುವ ಘಟನೆ ರಾಜ್ಯ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ. ಈ ವೇಳೆ ಇಬ್ಬರು ಆರೋಪಿಗಳನ್ನು ಸ್ಥಳೀಯರೇ ಹಿಡಿದು ಥಳಿಸಿದ್ದಾರೆ. ನಂತರ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಾಟ್ನಾದ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಐಜಿಐಎಂಎಸ್‌) ಕ್ಯಾಂಪಸ್​ಗೆ ಶನಿವಾರ ತಡರಾತ್ರಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ತೇಜ್ ಪ್ರತಾಪ್ ಯಾದವ್ ಭೇಟಿ ನೀಡಿದ್ದರು. ಯಾವುದೋ ಕೆಲಸದ ನಿಮಿತ್ತ ಐಜಿಐಎಂಎಸ್‌ಗೆ ಭೇಟಿ ನೀಡಿದ್ದ ಸಚಿವರು, ತಮ್ಮ ಕಾರನ್ನು ತುರ್ತು ಚಿಕಿತ್ಸಾ ವಿಭಾಗದ ಎದುರು ನಿಲ್ಲಿಸಿದ್ದರು.

ಇದನ್ನೂ ಓದಿ:ಕುಡಿತಕ್ಕೆ ನನ್ನ ಮಗ ಬಲಿಯಾದ, ದಯವಿಟ್ಟು ನಿಮ್ಮ ಹೆಣ್ಣು ಮಕ್ಕಳನ್ನು ಕುಡುಕರ ಜೊತೆ ಮದುವೆ ಮಾಡಬೇಡಿ: ಕೇಂದ್ರ ಸಚಿವರ ಮನವಿ

ನಂತರ ಸಚಿವ ಯಾದವ್ ತುರ್ತು ಚಿಕಿತ್ಸಾ ವಿಭಾಗದಿಂದ ಹೊರಬಂದು ತಮ್ಮ ವಾಹನವನ್ನು ಹತ್ತಲು ಹೊರಟಿದ್ದರು. ಆದರೆ, ಸಚಿವರ ಕಾರಿನಿಂದ ಸ್ಕಾರ್ಪಿಯೋ ಕಾರೊಂದು ಅದರ ಹಿಂದೆಯೇ ನಿಂತಿತ್ತು. ಇದರಿಂದಾಗಿ ಸಚಿವರ ಕಾರು ಹಿಂದಕ್ಕೂ ತೆಗೆಯಲು ಆಗದೆ, ಮುಂದಕ್ಕೂ ಚಲಿಸಲು ಆಗದೆ ಸಿಲುಕಿಕೊಂಡಂತೆ ಆಗಿತ್ತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಚಿವರ ಕಾರಿಗೆ ವೇಗವಾಗಿ ಗುದ್ದಿದ ಸ್ಕಾರ್ಪಿಯೋ ಚಾಲಕ

ಸಚಿವರ ಕಾರಿಗೆ ಗುದ್ದಿದ ಚಾಲಕ: ಸಚಿವರ ಕಾರಿನ ಹಿಂದೆಯೇ ಸ್ಕಾರ್ಪಿಯೋ ನಿಲ್ಲಿಸಿದ್ದರಿಂದ ತೇಜ್ ಪ್ರತಾಪ್ ಯಾದವ್ ಜೊತೆಯಲ್ಲಿದ್ದ ಭದ್ರತಾ ಅಧಿಕಾರಿಗಳು, ಸ್ಕಾರ್ಪಿಯೋ ಚಾಲಕನಿಗೆ ಹಿಂದೆ ಸರಿದು ದಾರಿ ಮಾಡಿಕೊಡುವಂತೆ ಹೇಳಿದ್ದಾರೆ. ಆದರೆ, ಚಾಲಕ ಕಾರನ್ನು ರಿವರ್ಸ್ ಮಾಡುವ ಬದಲು ಮುಂದಕ್ಕೆ ವೇಗವನ್ನು ಹೆಚ್ಚಿಸಿ ಸಚಿವರ ಯಾದವ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಬರ್ತ್​ಡೇ ಆಚರಿಸಿಕೊಳ್ಳಲು ಬಂದ ಯುವಕ ಮಹಡಿಯಿಂದ ಬಿದ್ದು ಗಂಭೀರ ಗಾಯ

ಅಂತೆಯೇ, ಸುತ್ತಮುತ್ತಲಿನ ಸ್ಥಳೀಯ ಜನರು ಆರೋಪಿ ಹಿಡಿದು ಥಳಿಸಿದ್ದಾರೆ. ಅಲ್ಲದೇ, ಚಾಲಕನೊಂದಿಗೆ ಮತ್ತೊಬ್ಬ ಕೂಡ ಇದ್ದ ಎಂದು ಹೇಳಲಾಗಿದೆ. ಇಬ್ಬರು ಕೂಡ ಕುಡಿದ ನಶೆಯಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ನಂತರ ಇಬ್ಬರು ಆರೋಪಿಗಳನ್ನೂ ಶಾಸ್ತ್ರಿನಗರ ಪೊಲೀಸರಿಗೆ ಸ್ಥಳೀಯ ಜನರೇ ಒಪ್ಪಿಸಿದ್ದಾರೆ.

ಚಾಲಕ ಪಾನಮತ್ತನಾಗಿದ್ದು ದೃಢ: ಮತ್ತೊಂದೆಡೆ ಘಟನೆ ವರದಿಯಾದ ತಕ್ಷಣವೇ ಕಾನೂನು ಸುವ್ಯವಸ್ಥೆ ಡಿಎಸ್‌ಪಿ ಸಂಜಯ್‌ಕುಮಾರ್‌, ಠಾಣಾಧಿಕಾರಿ ರಾಮಶಂಕರ್‌ ಸಿಂಗ್‌ ಸ್ಥಳಕ್ಕೆ ಆಗಮಿಸಿ ತಡರಾತ್ರಿ ಪರಿಶೀಲನೆ ನಡೆಸಿದರು. ನಂತರ ಸ್ಕಾರ್ಪಿಯೋ ಚಾಲಕ ಸೇರಿ ಇಬ್ಬರನ್ನೂ ತಮ್ಮ ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ದಂಧೆಯ ಕರಾಳ ಮುಖ.. ಹೆಚ್ಚುತ್ತಿದೆ ಮಹಿಳಾ ಡ್ರಗ್ಸ್​ ಪೆಡ್ಲರ್​ಗಳ ಸಂಖ್ಯೆ!

ಅಲ್ಲದೇ, ಆರೋಪಿಗಳು ಮದ್ಯ ಕುಡಿದ ಬಗ್ಗೆ ಬ್ರೀತ್​ಲೈಸರ್ ಪರೀಕ್ಷೆ ನಡೆಸಿದ್ದು, ಆಗ ಚಾಲಕ ಪಾನಮತ್ತನಾಗಿದ್ದ ಎಂಬುದು ದೃಢಪಟ್ಟಿದೆ. ಬಂಧಿತ ಆರೋಪಿ ಚಾಲಕನನ್ನು ಅಜಿತ್ ಎಂದು ಗುರುತಿಸಲಾಗಿದೆ. ಸದ್ಯ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿತಲಾಗಿದೆ. ಜೊತೆಗೆ ಸಚಿವರ ವಾಹನಕ್ಕೆ ಡಿಕ್ಕಿ ಹೊಡೆದ ಕಾರನ್ನೂ ವಶಪಡಿಸಿಕೊಂಡಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದೂ ಡಿಎಸ್‌ಪಿ ಸಂಜಯ್‌ಕುಮಾರ್‌ ವಿವರಿಸಿದ್ದಾರೆ.

ಇದೇ ವೇಳೆ ಆರೋಪಿ ಅಜಿತ್​ ತನ್ನ ತಾಯಿಯನ್ನು ಇದೇ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದೆ ಎಂಬುದಾಗಿ ಹೇಳಿಕೊಂಡಿದ್ದಾನೆ ಎಂದು ಡಿಎಸ್​ಪಿ ತಿಳಿಸಿದ್ದಾರೆ.

ಇದನ್ನೂ ಓದಿ:ಗಡಿಯಾಚೆಗಿನ ಡ್ರಗ್ಸ್​ ದಂಧೆಯ ಕಿಂಗ್​ ಪಿನ್​ಗಳ ಸೆರೆ: 10 ಕೆಜಿ ಹೆರಾಯಿನ್, 20 ಲಕ್ಷದ ಅಮೆರಿಕನ್ ಡ್ರೋನ್ ಜಪ್ತಿ

ABOUT THE AUTHOR

...view details