ಕರ್ನಾಟಕ

karnataka

ETV Bharat / bharat

ಯೂಟ್ಯೂಬ್ ನೋಡಿ ಮನೆಯಲ್ಲಿ ಆಕ್ಸಿಜನ್​ ತಯಾರಿಕೆ: ಡಾಕ್ಟರ್​, ವಿಜ್ಞಾನಿಗಳಿಂದ ಅಪಾಯದ ಎಚ್ಚರಿಕೆ

ಗೂಗಲ್ ಟ್ರೆಂಡ್ಸ್ ಡೇಟಾ, ಏಪ್ರಿಲ್ 25ರಂದು ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ 'ಮನೆಯಲ್ಲಿ ಆಮ್ಲಜನಕ ತಯಾರಿಸುವುದು ಹೇಗೆ' ಎಂಬ ಪದಗುಚ್ಛದ ಹುಡುಕಾಟಗಳು ಕಾಣಿಸಿಕೊಳ್ಳುತ್ತಿವೆ. ಅಂತಹ ಪ್ರಕ್ರಿಯೆಗಳನ್ನು ವಿವರಿಸುವ ಯೂಟ್ಯೂಬ್ ವಿಡಿಯೊಗಳು ಲಕ್ಷಾಂತರ ವೀಕ್ಷಣೆ ಪಡೆದಿದೆ. ವಿದ್ಯುದ್ವಿಭಜನೆಯಂತಹ ವಿಧಾನಗಳ ಮೂಲಕ ಆಮ್ಲಜನಕ ಹೇಗೆ ತಯಾರಿಸಬೇಕೆಂದು ತೋರಿಸುವ ವಿಡಿಯೋಗಳು ಸಂಖ್ಯೆಯಲ್ಲಿ ಹೆಚ್ಚುತ್ತಿವೆ.

oxygen
oxygen

By

Published : Apr 30, 2021, 8:30 PM IST

ನವದೆಹಲಿ: ಭಾರತವು ತನ್ನ ಕೋವಿಡ್​-19 ಸೋಂಕಿನ ಸಮರದಲ್ಲಿ ಆಕ್ಸಿಜನ್​ ಕೊರತೆ ಎದುರಿಸುತ್ತಿರುವ ಕಾರಣ, ಮನೆಯಲ್ಲಿ ವೈದ್ಯಕೀಯ ಆಮ್ಲಜನಕ ತಯಾರಿಕೆಯ ಪ್ರಯತ್ನಗಳ ಭೀಕರ ಅಪಾಯಗಳ ಬಗ್ಗೆ ಭಾರತದ ವೈದ್ಯರು ಮತ್ತು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಡಿಐವೈ ಆಕ್ಸಿಜನ್​ ಸಾಂದ್ರತೆ ವಿಧಾನಗಳ ಕುರಿತು ವಿವಿಧ ವಿಡಿಯೋಗಳು ಮತ್ತು ಸುಳಿವುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಗೂಗಲ್ ಟ್ರೆಂಡ್ಸ್ ಡೇಟಾ, ಏಪ್ರಿಲ್ 25ರಂದು ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ 'ಮನೆಯಲ್ಲಿ ಆಮ್ಲಜನಕ ತಯಾರಿಸುವುದು ಹೇಗೆ' ಎಂಬ ಪದಗುಚ್ಛದ ಹುಡುಕಾಟಗಳು ಕಾಣಿಸಿಕೊಳ್ಳುತ್ತಿವೆ. ಅಂತಹ ಪ್ರಕ್ರಿಯೆಗಳನ್ನು ವಿವರಿಸುವ ಯೂಟ್ಯೂಬ್ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆದಿದೆ. ವಿದ್ಯುದ್ವಿಭಜನೆಯಂತಹ ವಿಧಾನಗಳ ಮೂಲಕ ಆಮ್ಲಜನಕ ಹೇಗೆ ತಯಾರಿಸಬೇಕೆಂದು ತೋರಿಸುವ ವಿಡಿಯೋಗಳು ಸಂಖ್ಯೆಯಲ್ಲಿ ಹೆಚ್ಚುತ್ತಿವೆ. ಈ ಬಗ್ಗೆ ವೈದ್ಯರು ಅಪಾಯದ ಆತಂಕ ವ್ಯಕ್ತಪಡಿಸಿದ್ದಾರೆ.

ಸಾಂದ್ರಕಗಳ ಮೂಲಕ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸಲು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಧಾನವಿದೆ. ಮನೆಯಲ್ಲಿ ಆಕ್ಸಿಜನ್​ ತಯಾರಿಸಲು ಪ್ರಯತ್ನಿಸುವ ಯಾವುದೇ ವಿಧಾನವು ವಿಷಕಾರಿ ಅನಿಲ ಉಸಿರಾಡುವ ಸಾಧ್ಯತೆಗಳಿವೆ. ಸ್ಫೋಟಗಳಂತಹ ಅನೇಕ ಅಪಾಯಗಳನ್ನು ಒಳಗೊಂಡಿರುತ್ತದೆ ಎಂದು ವೈದ್ಯರೊಬ್ಬರು ವಾರ್ನ್​ ಮಾಡಿದ್ದಾರೆ.

ಮನೆಯಲ್ಲಿ ಆಮ್ಲಜನಕ ತಯಾರಿಸುವ ಪ್ರಯತ್ನಗಳು ವಿಶ್ವಾಸಾರ್ಹವಲ್ಲದ ವಿಧಾನಗಳು. ಸೂಕ್ತವಾದ ಆರೋಗ್ಯ ಸೇವೆಯನ್ನು ಪಡೆಯಲು ವಿಳಂಬಕ್ಕೆ ಕಾರಣವಾದರೆ ಅಂತಹ ತಂತ್ರವು ಹಾನಿಕಾರಕವಾಗಿದೆ ಎಂದಿದ್ದಾರೆ.

ಭಾರತವು ಆಮ್ಲಜನಕದ ಸರಬರಾಜನ್ನು ಹುಡುಕಲು ಪರದಾಡುತ್ತಿದೆ. ಅನೇಕ ಆಸ್ಪತ್ರೆಗಳು ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳನ್ನು ದೂರವಿಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಕೊರೊನಾ ವೈರಸ್ ಗುಣಪಡಿಸುವಿಕೆಯ ಪೊಳ್ಳು ವಿಡಿಯೋ ವೀಕ್ಷಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಪುರುಷರು ಕೋವಿಡ್​ ಸೋಂಕು ಕೊಲ್ಲಲು ಪ್ರೆಶರ್ ಕುಕ್ಕರ್‌ಗಳು ಅಥವಾ ಕೆಟಲ್‌ಗಳಿಂದ ಉಗಿ ಉಸಿರಾಡುವಂತೆ ತೋರಿಸುವ ವಿಡಿಯೋಗಳು.

ಕೋವಿಡ್​-19 ವೈರಸ್​ಗೆ ಚಿಕಿತ್ಸೆ ಕಂಡುಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ವಿಶ್ವದಾದ್ಯಂತದ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ ಎಂದು ಕೊರೊನಾವೈರಸ್ ಗುಣಪಡಿಸುವ ವಿಷಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

ABOUT THE AUTHOR

...view details