ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸ್ವದೇಶಿ mRNA ಲಸಿಕೆಯನ್ನು ಘೋಷಿಸಿದ್ದಾರೆ. ಹೈದರಾಬಾದ್ ಮೂಲದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರದ ಕೇಂದ್ರ (CCMB) ಶುಕ್ರವಾರ ಕೊರೊನಾ ವಿರುದ್ಧ ಸ್ವದೇಶಿ mRNA ಲಸಿಕೆ ಅಭಿವೃದ್ಧಿ ಪಡಿಸಿರುವ ಬಗ್ಗೆ ಪ್ರಕಟಿಸಿದೆ.
CCMB ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ mRNA ಲಸಿಕೆಯ ತಂತ್ರಜ್ಞಾನವು ಸ್ವದೇಶಿಯಾಗಿದೆ. ಇದರಲ್ಲಿ ಯಾವುದೇ ವಿದೇಶಿ ತಂತ್ರಜ್ಞಾನವನ್ನು ಬಳಸಲಾಗಿಲ್ಲ ಎಂದು ಹೇಳಲಾಗಿದೆ. CSIR-CCMB ಪ್ರಯೋಗಾಲಯದಲ್ಲಿ ಇಲಿಗಳನ್ನು ಬಳಸಿಕೊಂಡು ಮೊದಲ ಸ್ವದೇಶಿ mRNA ಲಸಿಕೆಯ ಯಶಸ್ಸನ್ನು ಘೋಷಿಸಿದೆ.
ಕೋವಿಡ್ ಸಮಯದಲ್ಲಿ ಜಗತ್ತು mRNA ಲಸಿಕೆಗಳ ಶಕ್ತಿ ಬಗ್ಗೆ ನೋಡಿದೆ. mRNA ಲಸಿಕೆ ಇಂದು ಪ್ರಮುಖ ಲಸಿಕೆ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಅಟಲ್ ಇನ್‌ಕ್ಯುಬೇಶನ್ ಸೆಂಟರ್-ಸಿಸಿಎಂಬಿ (ಎಐಸಿ-ಸಿಸಿಎಂಬಿ) ತಂಡದ ನೇತೃತ್ವದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಿಎಸ್‌ಐಆರ್-ಸಿಸಿಎಂಬಿ ದೇಶದಲ್ಲಿ ಎಂಆರ್‌ಎನ್‌ಎ ಲಸಿಕೆ ತಂತ್ರಜ್ಞಾನದ ಅಭಿವೃದ್ಧಿಯನ್ನು ಮುನ್ನಡೆಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.