ನವದೆಹಲಿ: ಫೆಬ್ರವರಿ 5ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 9ರಿಂದ 11ನೇ ತರಗತಿ ಕ್ಲಾಸ್ ಆರಂಭಗೊಳ್ಳಲಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಮಾಹಿತಿ ನೀಡಿದ್ದಾರೆ.
ಫೆ. 5ರಿಂದ ದೆಹಲಿಯಲ್ಲಿ 9ರಿಂದ 11ನೇ ತರಗತಿಗಳು ಆರಂಭ! - ದೆಹಲಿ ಇತ್ತೀಚಿನ ಸುದ್ದಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಫೆಬ್ರವರಿ 5ರಿಂದ 9ರಿಂದ 11ನೇ ತರಗತಿಗಳು ಪುನಾರಂಭಗೊಳ್ಳಲಿದ್ದು, ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದೆ.
Delhi Schools
ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲೆಗಳು ಕೋವಿಡ್-19 ಮಾರ್ಗಸೂಚಿ ಕಡ್ಡಾಯವಾಗಿ ಅನುಸರಣೆ ಮಾಡಬೇಕಾಗಿದ್ದು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪೋಷಕರಿಂದ ಅನುಮತಿ ಪತ್ರ ತೆಗೆದುಕೊಂಡು ಬರುವುದು ಕಡ್ಡಾಯವಾಗಿದೆ.
ಜತೆಗೆ ವಿದ್ಯಾರ್ಥಿಗಳು ಯಾವಾಗ ಪರೀಕ್ಷೆ ಎದುರಿಸಬೇಕು ಎಂಬುದರ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ದೆಹಲಿಯಲ್ಲಿ ಈಗಾಗಲೇ 10 ಹಾಗೂ 12ನೇ ತರಗತಿಗಳು ಆರಂಭಗೊಂಡಿವೆ.