ಚೆನ್ನೈ (ತಮಿಳುನಾಡು):ರಾಜಧಾನಿ ಚೆನ್ನೈ ಸೇರಿದಂತೆ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿ ನಿನ್ನೆ(ಭಾನುವಾರ ) ರಾತ್ರಿ ಭಾರಿ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಚೆನ್ನೈನಲ್ಲಿ ಸುಮಾರು 137 ಮಿಮೀಟರ್ ಮಳೆಯಾಗಿದೆ. ಇಂದು(ಸೋಮವಾರ) ಕೂಡ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಆಯಾ ಜಿಲ್ಲಾಡಳಿತಗಳು ತಿಳಿಸಿವೆ. ಇಲ್ಲಿಯವರೆಗೆ ರಾಣಿಪೇಟ್, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್‌ಪೇಟ್ ಮತ್ತು ವೆಲ್ಲೂರ್ ಎಂಬ ಆರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮುಂದಿನ 3 ಗಂಟೆಗಳ ಕಾಲ ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಮಾಪನಶಾಸ್ತ್ರ ಇಲಾಖೆ, ಚೆನ್ನೈ ತಿಳಿಸಿದೆ. ಈ ಮಧ್ಯೆ ದೆಹಲಿಯ ಕೆಲವು ಭಾಗಗಳಲ್ಲಿ ಇಂದು ಬೆಳಿಗ್ಗೆ ಸ್ವಲ್ಪ ಮಳೆ ಸುರಿದಿದೆ. ಸೋಮವಾರ ದೆಹಲಿಯಲ್ಲಿ ಅತಿ ಹಗುರವಾದ ಮಳೆ ಮತ್ತು ತುಂತುರು ಮಳೆಯಾಗುವ ಸಾಧ್ಯತೆಯೊಂದಿಗೆ ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆ: ನಿರಂತರ ಮಳೆಯ ನಂತರ ಅಸ್ಸೋಂ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಅಸ್ಸಾಂನ ಲಖಿಂಪುರದಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಸತತ ಮಳೆಯಿಂದ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ. ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಿದೆ.
ಇದನ್ನೂ ಓದಿ:Effect of cyclone: ಮುಂಬೈ, ಗುಜರಾತ್ ಕರಾವಳಿಯಲ್ಲಿ 'ಬಿಪೊರ್‌ಜಾಯ್' ಆರ್ಭಟ: ಭೋರ್ಗರೆದ ಬೃಹತ್ ಅಲೆಗಳು