ಚೆನ್ನೈ/ತಮಿಳುನಾಡು:ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ತಮಿಳುನಾಡಿನಲ್ಲಿ ಮಾರ್ಚ್ 22 ರಿಂದ 9, 10 ಮತ್ತು 11 ನೇ ತರಗತಿ ಶಾಲೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಈ ವಿದ್ಯಾರ್ಥಿಗಳ ಹಾಸ್ಟೆಲ್ಗಳನ್ನು ಸಹ ಮುಚ್ಚಲಾಗುವುದು. ಆದರೆ 9, 10, 11 ನೇ ತರಗತಿ ಮಕ್ಕಳಿಗೆ ಆನ್‌ಲೈನ್ / ಡಿಜಿಟಲ್ ಶಿಕ್ಷಣ ಮುಂದುವರಿಯುತ್ತದೆ. ಅಧಿಸೂಚನೆಗೆ ಅನುಗುಣವಾಗಿ, ತಮಿಳುನಾಡು ರಾಜ್ಯ ಮಂಡಳಿಯನ್ನು ಹೊರತುಪಡಿಸಿ ಇತರ ಮಂಡಳಿಗಳ 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಎಂದಿನಂತೆ ನಡೆಯಲಿದ್ದು, ಇವರಿಗಾಗಿ ವಿಶೇಷ ತರಗತಿಗಳು ಸಹ ಮುಂದುವರಿಯಲಿವೆ. ಅಲ್ಲದೇ ಇವರು ವಾಸಿಸುವ ಹಾಸ್ಟೆಲ್ಗಳು ಸಹ ತೆರದಿರಲಿವೆ.