ನವದೆಹಲಿ:ಗಾಳಿಯ ಗುಣಮಟ್ಟ ಸುಧಾರಿಸುವ ಸಲುವಾಗಿ ವಾಯುಮಾಲಿನ್ಯ ಕಡಿಮೆ ಮಾಡಲು ವಾಯು ಗುಣಮಟ್ಟ ನಿರ್ವಹಣಾ ಆಯೋಗವು (CAQM-Commission for Air Quality Management) ದೆಹಲಿಯ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲು ಆದೇಶಿಸಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಆನ್‌ಲೈನ್ ಶಿಕ್ಷಣಕ್ಕೆ (Online Education) ಮಾತ್ರ ಅವಕಾಶ ನೀಡುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಹೇಳಿಕೆ ನೀಡಿದೆ. ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಸಂಬಂಧಿ ಇತರ ಕಾಮಗಾರಿಗಳಿಗೆ ನವೆಂಬರ್ 21ರವರೆಗೆ ನಿರ್ಬಂಧ ಹೇರಲಾಗಿದೆ.
ರೈಲ್ವೆ ಸೇವೆಗಳು, ಮೆಟ್ರೋ ರೈಲು ನಿಗಮದ ಸೇವೆಗಳು, ವಿಮಾನ ನಿಲ್ದಾಣಗಳು ಮತ್ತು ಅಂತಾರಾಜ್ಯ ಬಸ್ ಟರ್ಮಿನಲ್‌ಗಳು (ISBTS) ಮತ್ತು ರಾಷ್ಟ್ರೀಯ ಭದ್ರತೆಗೆ (National Security) ಸಂಬಂಧಿಸಿದ ಸೇವೆಗಳನ್ನು ರದ್ದು ಮಾಡಲಾಗಿದ್ದು, ತ್ಯಾಜ್ಯ ಮತ್ತು ಧೂಳು ನಿರ್ವಹಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಮುಂದಾಗಿದೆ.
ದೆಹಲಿಯಿಂದ 300 ಕಿಲೋಮೀಟರ್ ವ್ಯಾಪ್ತಿಯಲ್ಲಿ 11 ಉಷ್ಣವಿದ್ಯುತ್ ಸ್ಥಾವರಗಳಿದ್ದು, (Thermal Plants) ಅವುಗಳಲ್ಲಿ ಕೇವಲ ಐದು ಸ್ಥಾವರಗಳಿಗೆ ಅವಕಾಶ ನೀಡಲಾಗಿದೆ. ಈ ಐದು ಸ್ಥಾವರಗಳು ನವೆಂಬರ್ 30ವರೆಗೆ ಮಾತ್ರ ಕಾರ್ಯನಿರ್ವಹಣೆ ಮಾಡಲು ಅನುಮತಿ ನೀಡಲಾಗಿದೆ.