ಕರ್ನಾಟಕ

karnataka

ETV Bharat / bharat

ಸೋಶಿಯಲ್​ ಮೀಡಿಯಾದಲ್ಲಿ ಮಹಿಳೆಯ ಅಶ್ಲೀಲ ವಿಡಿಯೋ ಅಪ್​​ಲೋಡ್​: ಶಾಲಾ ಶಿಕ್ಷಕ ಅರೆಸ್ಟ್​ - ಜೈಪಟ್ನಾದಲ್ಲಿ ಶಿಕ್ಷಕನ ಬಂಧನ ಸುದ್ದಿ

ಮಹಿಳೆಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ ಆರೋಪದಡಿ ಶಾಲಾ ಶಿಕ್ಷಕನೋರ್ವನನ್ನು ಒಡಿಶಾದ ಜೈಪಟ್ನಾ ಪೊಲೀಸರು ಬಂಧಿಸಿದ್ದಾರೆ.

School Teacher  Arrestes for Obscene Video Of Woman On Social Media
ಶಾಲಾ ಶಿಕ್ಷಕ ಅರೆಸ್ಟ್​

By

Published : Feb 20, 2021, 10:07 AM IST

ಜೈಪಟ್ನಾ/ಕಲಾಹಂಡಿ:ಮಹಿಳೆಯೊಬ್ಬರ ಅಶ್ಲೀಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಆರೋಪದಡಿ ಜೈಪಟ್ನಾ ಪೊಲೀಸರು ಪ್ರಾಥಮಿಕ ಶಾಲಾ ಶಿಕ್ಷಕನೋರ್ವನ ಹೆಡೆಮುರಿ ಕಟ್ಟಿದ್ದಾರೆ.

ಶಾಲಾ ಶಿಕ್ಷಕ ಅರೆಸ್ಟ್​

ಜೈಪಟ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಕಲಾಂಪುರ ಬ್ಲಾಕ್‌ನ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ ಬಿಜ್ಮರ ಗ್ರಾಮದ ಹನುಮಾತಾ ಮಾಜಿ ಬಂಧಿತ ಆರೋಪಿ.

35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಇವನನ್ನು ಗುರುವಾರ ಬಂಧಿಸಲಾಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಮಾಜಿ ‘ದೇಸಿ ಮಾಲ್ ಗ್ರೂಪ್’ ಹೆಸರಿನಲ್ಲಿ ವಾಟ್ಸ್ಯಾಪ್​ ಗ್ರೂಪ್​ ರಚಿಸಿ ಅದರಲ್ಲಿ ಮಹಿಳೆಯ ಅಶ್ಲೀಲ ವಿಡಿಯೋ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನ ನಂತರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹನುಮಾತಾ ಮಾಜಿಯ ಮೊಬೈಲ್ ಫೋನ್ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ಮುಂದುವರೆದಿದೆ.

ABOUT THE AUTHOR

...view details