ಮಲಪ್ಪುರಂ (ಕೇರಳ): ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುವುದು ವಿಶೇಷವೇನಲ್ಲ. ಆದರೆ ಮಲಪ್ಪುರಂ ಜಿಲ್ಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರೋರ್ವರು ಸ್ವತಃ ಹೆದ್ದಾರಿಗೆ ಬಂದು ಬಸ್ಸನ್ನು ತಡೆದು ನಿಧಾನವಾಗಿ ಚಲಿಸುವಂತೆ ಮತ್ತು ಶಾಲಾ ಬಸ್ ನಿಲ್ದಾಣದ ಬಳಿ ನಿಲುಗಡೆಗೆ ಒತ್ತಾಯಿಸಿರುವ ಘಟನೆ ನಡೆದಿದೆ.
ಶಾಲಾ ಮುಖ್ಯೋಪಾಧ್ಯಾಯರಿಂದ ಬಸ್ಗೆ ಅಡ್ಡ ನಿಂತು ಪ್ರತಿಭಟನೆ.. ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುವಂತೆ ಒತ್ತಾಯ - ಶಾಲಾ ಮುಖ್ಯೋಪಾಧ್ಯಾಯ ಸೈನುದ್ದೀನ್ ಸಕೀರ್
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರೋರ್ವರು ಸ್ವತಃ ಹೆದ್ದಾರಿಗೆ ಬಂದು ಬಸ್ಸನ್ನು ತಡೆದು ನಿಧಾನವಾಗಿ ಚಲಿಸುವಂತೆ ಮತ್ತು ಶಾಲಾ ಬಸ್ ನಿಲ್ದಾಣದ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿರುವ ಘಟನೆ ನಡೆದಿದೆ.
ಶಾಲಾ ಮುಖ್ಯೋಪಾಧ್ಯಾಯರಿಂದ ಬಸ್ಗೆ ಅಡ್ಡ ನಿಂತು ಪ್ರತಿಭಟನೆ : ವಿದ್ಯಾರ್ಥಿಗಳಿಗೆ ನಿಲ್ಲಿಸಲು ಬೇಡಿಕೆ
ಈ ಘಟನೆ ಇಂದು ಬೆಳಗ್ಗೆ ಇಲ್ಲಿನ ಕೆಳಕೋಡ್‌ನ ಪಿಟಿಎಂಎಚ್‌ಎಚ್ ಶಾಲೆಯ ಬಳಿ ನಡೆದಿದೆ. ಶಾಲಾ ಮುಖ್ಯೋಪಾಧ್ಯಾಯ ಸೈನುದ್ದೀನ್ ಸಕೀರ್ ಅವರು ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ನಡುವೆ ಸಂಚರಿಸುವ‘ರಾಜಪ್ರಭ’ ಎಂಬ ಖಾಸಗಿ ಬಸ್ಸನ್ನು ತಡೆದು, ಶಾಲೆಯ ಬಳಿ ನಿಲುಗಡೆ ಮಾಡುವಂತೆ ಪ್ರತಿಭಟಿಸಿದ್ದಾರೆ. ಸದ್ಯ ಮುಖ್ಯೋಪಾಧ್ಯಾಯರು ಪ್ರತಿಭಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ :ಭೀಕರ ರಸ್ತೆ ಅಪಘಾತ ಪೊಲೀಸ್ ಸೇರಿ ಮೂವರ ಸಾವು.. ಹಲವರಿಗೆ ಗಾಯ