ಪಾಟ್ನಾ (ಬಿಹಾರ): ಬಿಹಾರದಲ್ಲಿ ಶಿಕ್ಷಣದ ಗುಣಮಟ್ಟ ಯಾವ ರೀತಿ ಇದೆ ಎಂಬುವುದಕ್ಕೆ ಇಲ್ಲೊಂದು ತಾಜಾ ನಿರ್ದಶನವಿದೆ. ರಾಜ್ಯಾದ್ಯಂತ ಖಾಲಿ ಇದ್ದ 6,421 ಹೆಡ್ ಮಾಸ್ಟರ್‌ಗಳ (ಹೆಚ್ಎಂ) ಹುದ್ದೆಗಳಿಗೆ ಪರೀಕ್ಷೆ ಬರೆದ 13 ಸಾವಿರ ಹಾಲಿ ಶಿಕ್ಷಕರಲ್ಲಿ ಕೇವಲ 421 ಜನ ಮಾತ್ರವೇ ಉತ್ತೀರ್ಣರಾಗಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ನೇಮಕಾತಿಗಾಗಿ ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಮೇ 31ರಂದು ಪರೀಕ್ಷೆ ನಡೆಸಿದೆ. 6,421 ಖಾಲಿ ಹುದ್ದೆಗಳಿಗೆ ಪ್ರಸ್ತುತ ಶಿಕ್ಷಕರಾಗಿರುವ 13 ಸಾವಿರಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, 421 ಅಭ್ಯರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.