ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ಶಾಲಾ ಬಸ್​ನಲ್ಲಿ ಏಕಾಏಕಿ ಬೆಂಕಿ! - Etv Bharat Kannada

ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಬೆಂಕಿಗಾಹುತಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

SCHOOL BUS
ಹೊತ್ತಿ ಉರಿಯುತ್ತಿರುವ ಬಸ್​

By

Published : Sep 12, 2022, 9:42 PM IST

ಮುಂಬೈ:ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಶಾಲಾ ಬಸ್​ವೊಂದು ಏಕಾಏಕಿ ಬೆಂಕಿಗಾಹುತಿಯಾಗಿ ಹೊತ್ತಿ ಉರಿದಿರುವ ಘಟನೆ ನವಿ ಮುಂಬೈನ ಟೌನ್‌ಶಿಪ್‌ನ ಖಾರ್ಘರ್ ಪ್ರದೇಶದಲ್ಲಿ ನಡೆದಿದೆ.

ಶಾಲಾ ಬಸ್​ನಲ್ಲಿ ಏಕಾಏಕಿ ಬೆಂಕಿ

ಇಂದು ಬೆಳಗ್ಗೆ 11.30ರ ಸಮಾರಿಗೆ ಸುಮಾರು 20 ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಚಾಲಕ ತಕ್ಷಣ ಬಸ್ ರಸ್ತೆಯಲ್ಲಿ ನಿಲ್ಲಿಸಿದ್ದು, ಬಸ್​ನಲ್ಲಿದ್ದ ಇಪ್ಪತ್ತು ಮಕ್ಕಳನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ. ಬಳಿಕ ಕ್ಷಣಾರ್ಧದಲ್ಲೇ ಇಡೀ ಬಸ್​​ ಬೆಂಕಿಗಾಹುತಿಯಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ. ಬೆಂಕಿಗಾಹುತಿಯಾಗಿರುವ ಬಸ್​ ಪೀಪಲ್ಸ್ ಖಾಸಗಿ​ ವಿದ್ಯಾಸಂಸ್ಥೆಯದ್ದು ಎಂದು ತಿಳಿದು ಬಂದಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದು, ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಅಗ್ನಿಶಾಮ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ:ಸೊಳ್ಳೆ ನಾಶಕ್ಕೆ ಸಿಂಪಡಿಸಿದ ಸ್ಪ್ರೇ ಉಸಿರಾಡಿ ಮೂರ್ಛೆ ಬಿದ್ದ 16 ಮಹಿಳಾ ಸಿಬ್ಬಂದಿ!

ABOUT THE AUTHOR

...view details