ಮೊರಾದಾಬಾದ್(ಉತ್ತರ ಪ್ರದೇಶ):ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಸೋದರ ಮಾವನ ಬದಲು ಅಳಿಯನೊಬ್ಬ ಕಳೆದ ಐದು ವರ್ಷಗಳಿಂದ ಪೊಲೀಸ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡ್ತಿದ್ದು, ಸಂಬಂಧಿಯೊಬ್ಬರು ನೀಡಿರುವ ದೂರಿನ ಮೇರೆಗೆ ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್ನ ಪೊಲೀಸ್ ಇಲಾಖೆಯಲ್ಲಿನ ಅವ್ಯವಸ್ಥೆ ಬೆಳಕಿಗೆ ಬಂದಿದ್ದು, ಕಳೆದ ಐದು ವರ್ಷಗಳಿಂದ ಸೋದರ ಮಾವನ ಬದಲಿಗೆ ಅಳಿಯನೋರ್ವ ಕಾನ್ಸ್ಟೆಬಲ್ ಆಗಿ ಕೆಲಸ ಮಾಡಿದ್ದಾರೆ. ಇಷ್ಟಾದರೂ ಪ್ರಕರಣ ಮಾತ್ರ ಇಲಾಖೆಯ ಗಮನಕ್ಕೆ ಬಂದಿರಲಿಲ್ಲ. ಇದೀಗ ಸಂಬಂಧಿಕರೊಬ್ಬರು ದೂರು ನೀಡಿದ್ದು, ವಿಷಯ ಬಹಿರಂಗಗೊಂಡಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಓರ್ವನ ಬಂಧನ ಮಾಡಿದ್ದು, ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ.
ಏನಿದು ಪ್ರಕರಣ?
ಮೊರಾದಾಬಾದ್ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಆಗಿ ಅನಿಲ್ ಕುಮಾರ್ 2016ರಲ್ಲಿ ನೇಮಕಗೊಂಡಿದ್ದರು. ಅವರನ್ನ ಠಾಕೂರ್ದ್ವಾರದಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಅನಿಲ್ ಕುಮಾರ್ ಈ ಕೆಲಸವನ್ನ ತಮ್ಮ ಅಳಿಯ ಸುನಿಲ್ಗೆ ಉಡುಗೊರೆಯಾಗಿ ನೀಡಿದ್ದಾರೆ. ಸತತ ಐದು ವರ್ಷಗಳ ಕಾಲ ಸುನಿಲ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಕೋಲಾಹಲ ಉಂಟಾಗಿದ್ದು, ತಕ್ಷಣವೇ ಅನಿಲ್ ಕುಮಾರ್ನನ್ನು ಬಂಧನ ಮಾಡಿದ್ದಾರೆ.
ಇದನ್ನೂ ಓದಿರಿ: ನಿಮ್ಮಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತಿದೆಯಾ.. ಇಲ್ಲಿವೆ ಕಾರಣ, ಪರಿಹಾರಗಳು..
ಅನಿಲ್ ಕುಮಾರ್ ಮುಜಾಫರ್ನಗರದ ಖತೌನಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಪೊಲೀಸ್ ಇಲಾಖೆ ದೈಹಿಕ ಪರೀಕ್ಷೆಯಲ್ಲಿ ನಾಲ್ಕು ಸಲ ವಿಫಲಗೊಂಡ ಬಳಿಕ 2016ರಲ್ಲಿ ಉತ್ತೀರ್ಣರಾಗಿದ್ದರು. ಅವರನ್ನ ಕೆಲಸಕ್ಕೆ ನೇಮಕ ಮಾಡುತ್ತಿದ್ದಂತೆ ಅಳಿಯ ಸುನಿಲ್ ಈ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇಷ್ಟಾದರೂ ಪೊಲೀಸ್ ಇಲಾಖೆಯಗೆ ಮಾಹಿತಿ ಗೊತ್ತಾಗಿಲ್ಲ. ಇದೀಗ ದೂರು ದಾಖಲಾಗಿದ್ದರಿಂದ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.