ಕರ್ನಾಟಕ

karnataka

ETV Bharat / bharat

ಸುಪ್ರೀಂಕೋರ್ಟ್​ನಲ್ಲಿ ಮತ್ತೆ ಆರಂಭವಾಗಲಿದೆ ಮುಖಾಮುಖಿ ವಿಚಾರಣೆ - ಫಿಜಿಕಲ್​ ಮೋಡ್ ಮತ್ತು ವರ್ಚುವಲ್ ಮೋಡ್​ನ ಎರಡೂ ಆಯ್ಕೆ

ಉತ್ತಮ ವ್ಯವಸ್ಥೆಯೊಂದಿಗೆ ನೇರವಿಚಾರಣೆ ಶೀಘ್ರದಲ್ಲೇ ಪುನರಾರಂಭಿಸಲು ಸುಪ್ರೀಂಕೋರ್ಟ್ ಸಿದ್ಧವಾಗಿದೆ. ಇದರಲ್ಲಿ ಫಿಜಿಕಲ್​ ಮೋಡ್ ಮತ್ತು ವರ್ಚುವಲ್ ಮೋಡ್​ನ ಎರಡೂ ಆಯ್ಕೆಯನ್ನು ವಕೀಲರಿಗೆ ನೀಡಲಾಗುವುದು.

Supreme Court
ಸುಪ್ರೀಂಕೋರ್ಟ್

By

Published : Feb 1, 2021, 7:21 PM IST

ನವದೆಹಲಿ: ಸುಪ್ರೀಂಕೋರ್ಟ್​ನಲ್ಲಿ ಸದ್ಯದ್ರಲ್ಲೇ ಉತ್ತಮವಾದ ವ್ಯವಸ್ಥೆಯೊಂದಿಗೆ ನೇರ (ಮುಖತಃ) ವಿಚಾರಣೆ ಆರಂಭವಾಗಲಿದೆ. ಜೊತೆಗೆ ವಕೀಲರಿಗೆ ವರ್ಚುವಲ್​ ಮೋಡ್​ ಮತ್ತು ಫಿಜಿಕಲ್​ ಮೋಡ್​ನ​ ಎರಡೂ ಆಯ್ಕೆಯನ್ನು ನೀಡಲಾಗುವುದು.

ಮುಖತಃ ವಿಚಾರಣೆ ಫೆ.8ರಿಂದ ಆರಂಭವಾಗಲಿದ್ದು, ಈ ರೀತಿ ವಿಚಾರಣೆ ನಡೆಸಲು ಇಚ್ಛಿಸುವ ವಕೀಲರು ಎಲ್ಲ ದಾಖಲೆಗಳನ್ನು ನೀಡಿ, ನೋಂದಣಿ ಮಾಡಿಸಬೇಕಾಗುತ್ತದೆ. ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರು ಈ ಕುರಿತು ಚರ್ಚಿಸಲು ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಾಲಿಸಿಟರ್ ಜನರಲ್, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ತುಷಾರ್ ಮೆಹ್ತಾ, ಪದಾಧಿಕಾರಿಗಳು, ಹಿರಿಯ ವಕೀಲ ವಿಕಾಸ್ ಸಿಂಗ್ ಇತರರು ಭಾಗವಹಿಸಿದ್ದರು.

ಓದಿ: ರೈತರ ಸಾಲ ಮನ್ನಾ ಮಾಡಿ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿ: ರಾಕೇಶ್​ ಟಿಕಾಯತ್​

ಮೂಲಗಳ ಪ್ರಕಾರ, "ವೈದ್ಯಕೀಯ ಸಲಹೆಯನ್ನು ಪಡೆದು, ಮಧ್ಯಸ್ಥಗಾರರ ಆರೋಗ್ಯ, ಮೂಲಭೂತ ಸೌಕರ್ಯಗಳನ್ನು ನೋಡಿಕೊಂಡು ಮತ್ತು ನೋಂದಾವಣೆಗೆ ಸಿಬ್ಬಂದಿ ಲಭ್ಯತೆ, ಅಸ್ತಿತ್ವದಲ್ಲಿರುವ ಅಡೆತಡೆಗಳನ್ನು ನಿವಾರಿಸಿದ ನಂತರ" ನೇರ ಮುಖಾಮುಖಿ ವಿಚಾರಣೆಯನ್ನು ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ.

ವರ್ಚುವಲ್ ವಿಚಾರಣೆಯಿಂದಾಗಿ ವಕೀಲರು ತೊಂದರೆ ಅನುಭವಿಸುತ್ತಿದ್ದ ಕಾರಣ ನೇರ ವಿಚಾರಣೆಯನ್ನು ಪ್ರಾರಂಭಿಸಲು ಅನೇಕ ಪ್ರಾತಿನಿಧ್ಯಗಳನ್ನು ಸುಪ್ರೀಂಕೋರ್ಟ್‌ಗೆ ಕಳುಹಿಸಲಾಗಿದೆ. ಅನೇಕ ವಕೀಲರು ವರ್ಚುವಲ್ ವಿಚಾರಣೆಯಲ್ಲಿ ಕಾಣಿಸಿಕೊಳ್ಳಲು ತಾಂತ್ರಿಕ ಮೂಲಸೌಕರ್ಯಗಳನ್ನು ಹೊಂದಿರಲಿಲ್ಲ. ಈ ಎಲ್ಲ ಕಾರಣಗಳಿಂದ ನೇರವಿಚಾರಣೆಯನ್ನು ಆರಂಭಿಸಲಾಗುತ್ತಿದೆ.

ABOUT THE AUTHOR

...view details