ನವದೆಹಲಿ:ಉನ್ನತ ನ್ಯಾಯಾಲಯದ ಎರಡನೇ ಹಿರಿಯ-ನ್ಯಾಯಾಧೀಶರ ವಿರುದ್ಧ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಮಾಡಿರುವ ಆರೋಪ ಸಂಬಂಧ ಜಗನ್ರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ನ್ಯಾಯಮೂರ್ತಿ ರಮಣ ರೆಡ್ಡಿಯವರ ವಿರುದ್ಧ ಸಿಎಂ ಜಗನ್ ಮಾಡಿರುವ ನಿರಾಧಾರ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ವಿವರಣೆ ಕೋರಿದೆ. ಈ ಸಂಬಂಧ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ನ ನ್ಯಾಯಪೀಠ ಇಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಆಲಿಸಲಿದೆ.
ವಕೀಲರಾದ ಜಿ.ಎಸ್. ಮಣಿ, ಪ್ರದೀಪ್ ಕುಮಾರ್ ಯಾದವ್ ಮತ್ತು ಎಸ್.ಕೆ. ಸಿಂಗ್ ಅವರು ಜಂಟಿಯಾಗಿ ಸಲ್ಲಿಸಿರುವ ಪಿಐಎಲ್, ಜಗನ್ ಮೋಹನ್ ರೆಡ್ಡಿ ಅವರು ನ್ಯಾಯಾಲಯದಲ್ಲಿ ಮನಿ ಲಾಂಡರಿಂಗ್ ಮತ್ತು ಭ್ರಷ್ಟಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಅಧಿಕಾರ ಮತ್ತು ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನ್ಯಾಯಾಲಯದಿಂದ ವೈಯಕ್ತಿಕ ಲಾಭವನ್ನು ಪಡೆಯುವ ಸಲುವಾಗಿ, ಉನ್ನತ ನ್ಯಾಯಾಧೀಶರ ವಿರುದ್ಧ ಬಹಿರಂಗವಾಗಿ ಸುಳ್ಳು, ಹಗರಣದ ಹೇಳಿಕೆಗಳು ಮತ್ತು ರಾಜಕೀಯ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೀಗಾಗಿ ನ್ಯಾಯಮೂರ್ತಿ ರಮಣ ವಿರುದ್ಧ ರೆಡ್ಡಿ ವಿರುದ್ಧ ಸಿಎಂ ಜಗನ್ ಮಾಡಿರುವ ಅಸ್ಪಷ್ಟ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಂತರಿಕ ಸಮಿತಿಯನ್ನು ಅಥವಾ ಕೇಂದ್ರೀಯ ತನಿಖಾ ದಳ (ಸಿಬಿಐ) ಸೇರಿದಂತೆ ಯಾವುದೇ ಪ್ರಾಧಿಕಾರವನ್ನು ರಚಿಸುವ ಮೂಲಕ ವಿವರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.