ಕರ್ನಾಟಕ

karnataka

ETV Bharat / bharat

ಪಾಲ್ಘರ್​ ಸಾಧುಗಳ ಹತ್ಯೆ ಕೇಸ್: ಇಂದು ಸುಪ್ರೀಂನಲ್ಲಿ ವಿಚಾರಣೆ - ಮಹಾರಾಷ್ಟ್ರದ ಪಾಲ್ಘರ್​ ಸಾಧುಗಳ ಹತ್ಯೆ

ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣ ಸಂಬಂಧ ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

Palghar mob-lynching case
ಪಾಲ್ಘರ್​ ಸಾಧುಗಳ ಹತ್ಯೆ

By

Published : Feb 24, 2021, 9:48 AM IST

ನವದೆಹಲಿ: ಪಾಲ್ಘರ್​ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ತಪ್ಪಿತಸ್ಥ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದ್ದು, ಇಬ್ಬರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಇದನ್ನು ಓದಿ: ಪಾಲ್ಘರ್ ಸಾಧುಗಳ ಮೇಲಿನ ಹಲ್ಲೆ ಪ್ರಕರಣ: ಕೋರ್ಟ್​​​​​​​ಗೆ​​​​​​​​​​​​​​​​ ಚಾರ್ಜ್​​​​​ಶೀಟ್ ಸಲ್ಲಿಸಿದ ಸಿಐಡಿ

2020 ಏಪ್ರಿಲ್ 16ರ ರಾತ್ರಿ ಸಾಧುಗಳ ಮೇಲೆ ಸುಮಾರು 2,000ಕ್ಕೂ ಅಧಿಕ ಜನರು ಸೇರಿ ಹಲ್ಲೆ ನಡೆಸಿದ್ದರು. ಮುಂಬೈನಿಂದ ಗುಜರಾತ್‌ಗೆ ತೆರಳುತ್ತಿದ್ದ ಸಾಧುಗಳಾದ ಕಲ್ಪವೃಕ್ಷ ಗಿರಿ ಮಹಾರಾಜ್‌ (70), ಸುಶೀಲ್‌ ಗಿರಿ ಮಹಾರಾಜ್‌ (35) ಮತ್ತು ವಾಹನ ಚಾಲಕ ನಿಲೇಶ್‌ ತೆಲಗಡೆ ಅವರನ್ನು ಪಾಲ್ಘರ್‌ ಜಿಲ್ಲೆಯ ಗಡ್‌ಚಿಂಚ್ಲೆ ಗ್ರಾಮದ ಬಳಿ ಮಕ್ಕಳ ಕಳ್ಳರೆಂದು ಭಾವಿಸಿ ಜನರು ಸಾಮೂಹಿಕವಾಗಿ ಥಳಿಸಿ ಹತ್ಯೆಗೈದಿದ್ದರು. ಈ ಘಟನೆ ಪೊಲೀಸರ ಸಮ್ಮುಖದಲ್ಲಿಯೇ ಘಟನೆ ನಡೆದಿತ್ತು ಎನ್ನಲಾಗ್ತಿದೆ.

ಘಟನೆಯಲ್ಲಿ ಜನರು ಲಾಕ್​ಡೌನ್ ಮಾನದಂಡಗಳನ್ನು ಉಲ್ಲಂಘಿಸಿ ಒಟ್ಟುಗೂಡಿದ್ದರು. ಆದರೆ ಈ ಘಟನೆಯನ್ನು ತಡೆಯಲು ವಿಫಲವಾದ ಕಾರಣಕ್ಕೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

ABOUT THE AUTHOR

...view details