ನವದೆಹಲಿ: ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದನ್ನು ಪ್ರಶ್ನಿಸಿರುವ ಉದ್ಧವ್ ಠಾಕ್ರೆ ಶಿವಸೇನಾ ಬಣ ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಜುಲೈ 11 ರಂದು ನಡೆಯಲಿದೆ. ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇರುವ ಅರ್ಜಿಗಳ ವಿಚಾರಣೆಯೂ ಇದೇ ದಿನ ನಡೆಯಲಿದೆ. ಅದರೊಂದಿಗೆ ಈ ಹೊಸ ಅರ್ಜಿಯ ವಿಚಾರಣೆಯನ್ನೂ ನಡೆಸುವಂತೆ ಶಿವಸೇನಾ ಮುಖಂಡ ಸುಭಾಷ ದೇಸಾಯಿ ಅವರ ಪರವಾಗಿ ಹಾಜರಾದ ವಕೀಲ ದೇವದತ್ತ ಕಾಮತ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
'ಮಹಾ' ಸಿಎಂ ಆಗಿ ಏಕನಾಥ್ ಶಿಂಧೆ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ - ಮಹಾವಿಕಾಸ ಆಘಾಡಿ ಸರ್ಕಾರ ಪತನ
ಉದ್ಧವ್ ಠಾಕ್ರೆ ಬಣದ ಅರ್ಜಿಯನ್ನು ಜುಲೈ 11 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ.ಮಹೇಶ್ವರಿ ಅವರ ರಜಾಕಾಲದ ಪೀಠವು ತಿಳಿಸಿದೆ.
SC to hear on July 11 fresh plea against appointment of Eknath Shinde as Maha CM
"ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದನ್ನು ನಾವು ಪ್ರಶ್ನಿಸುತ್ತಿದ್ದೇವೆ." ಎಂದು ದೇವದತ್ತ ಕಾಮತ್ ಹೇಳಿದರು.