ಕರ್ನಾಟಕ

karnataka

ETV Bharat / bharat

ಕೆಲಸದ ಸ್ಥಳದಲ್ಲಿ ಸಂಗಾತಿ ತೇಜೋವಧೆ ಮಾಡಿದರೆ ವಿಚ್ಛೇದನ ಪಡೆಯಬಹುದು : ಸುಪ್ರೀಂ

ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಂಗಾತಿಗೆ ತೇಜೋವಧೆ ಮಾಡಿದರೆ, ಆಕೆ/ ಆತ ವಿಚ್ಛೇದನ ಪಡೆಯಬಹುದು, ಒಟ್ಟಿಗೆ ಬಾಳಬೇಕೆಂಬ ನಿರ್ಬಂಧವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

ಸುಪ್ರೀಂ
ಸುಪ್ರೀಂ

By

Published : Feb 27, 2021, 4:56 PM IST

ನವದೆಹಲಿ: ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಂಗಾತಿಗೆ ಇನ್ನೋರ್ವ ಸಂಗಾತಿ ತೇಜೋವಧೆ ಮಾಡಿದರೆ, ಆಕೆ/ ಆತ ವಿಚ್ಛೇದನ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್​ ಕೌಲ್ ನೇತೃತ್ವದ ಪೀಠವು, ಡಿವೋರ್ಸ್​ಗೆ ಸಂಬಂಧಿಸಿದಂತೆ ಅರ್ಜಿಯೊಂದರ ವಿಚಾರಣೆ ನಡೆಸುವ ವೇಳೆ ಈ ಮಾಹಿತಿ ನೀಡಿದೆ. ಪತ್ನಿಯು ಪತಿಯ ವಿರುದ್ಧ ಪದೇಪದೆ ಮೇಲಧಿಕಾರಿಗಳಿಗೆ ದೂರು ನೀಡುತ್ತಿದ್ದರು. ಅಲ್ಲದೆ, ವ್ಯಭಿಚಾರದ ಆರೋಪವನ್ನೂ ಹೊರಿಸಿದ್ದರು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಹೃಷಿಕೇಶ ರಾಯ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠವು ಈ ರೀತಿಯ ಸಂದರ್ಭಗಳಲ್ಲಿ, ಅನ್ಯಾಯಕ್ಕೊಳಗಾದವರು ವೈವಾಹಿಕ ಸಂಬಂಧವನ್ನು ಮುಂದುವರೆಸುವ ಅವಶ್ಯಕತೆಯಿಲ್ಲ ಮತ್ತು ಅವರು ಡಿವೋರ್ಸ್ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

ಪ್ರತ್ಯೇಕತೆಗಾಗಿ ನಿರ್ಧರಿಸುವಾಗ ದಂಪತಿಗಳ ಹಿನ್ನೆಲೆ, ಸ್ಥಿತಿ ಮತ್ತು ಶಿಕ್ಷಣದ ಮಟ್ಟವನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.

ABOUT THE AUTHOR

...view details