ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ತಾನು ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​ - ಹೈಕೋರ್ಟ್​ ಅಧಿಕಾರ ವ್ಯಾಪ್ತಿ

"ನಾವು ಕೇವಲ ಹೆಚ್ಚುವರಿ ಸಹಕಾರಿಯಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಾದೇಶಿಕ ಗಡಿಗಳ ಸೀಮಿತ ವ್ಯಾಪ್ತಿಯ ಕಾರಣದಿಂದ ಹೈಕೋರ್ಟ್​ಗಳು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ಸಹಾಯಕ್ಕೆ ನಾವು ಸಿದ್ಧರಿದ್ದೇವೆ." ಎಂದು ಎಲ್​. ನಾಗೇಶ್ವರ್ ರಾವ್ ಹಾಗೂ ಎಸ್​. ರವೀಂದ್ರ ಭಟ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.​

SC says it can't be mute spectator in national crisis, doesn't intend to supplant HC cases on COVID-19
ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ತಾನು ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್​

By

Published : Apr 27, 2021, 8:27 PM IST

ನವದೆಹಲಿ: ದೇಶದಲ್ಲಿ ಕೋವಿಡ್​ ಎರಡನೇ ಅಲೆ ಹರಡುವಿಕೆಯನ್ನು ರಾಷ್ಟ್ರೀಯ ಬಿಕ್ಕಟ್ಟು ಎಂದು ಹೇಳಿರುವ ಸುಪ್ರೀಂಕೋರ್ಟ್​, ಇಂಥ ಸಮಯದಲ್ಲಿ ತಾನು ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ ಹಾಗೂ ಕೋವಿಡ್​ ನಿರ್ವಹಣೆ ಕುರಿತಾಗಿ ತಾನು ಸ್ವಯಂ ಪ್ರೇರಿತವಾಗಿ ಕೈಗೊಂಡ ಕ್ರಮಗಳು ಹೈಕೋರ್ಟ್​ಗಳ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿಲ್ಲ ಎಂದಿದೆ.

ಹೈಕೋರ್ಟ್​ಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯಲ್ಲಿನ ಕೋವಿಡ್​ ಸಂಬಂಧಿತ ಪ್ರಕರಣಗಳ ವಿಚಾರಣೆಗಳನ್ನು ನಡೆಸಲು ಹೆಚ್ಚು ಸೂಕ್ತವಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

"ನಾವು ಕೇವಲ ಹೆಚ್ಚುವರಿ ಸಹಕಾರಿಯಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಾದೇಶಿಕ ಗಡಿಗಳ ಸೀಮಿತ ವ್ಯಾಪ್ತಿಯ ಕಾರಣದಿಂದ ಹೈಕೋರ್ಟ್​ಗಳು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ಸಹಾಯಕ್ಕೆ ನಾವು ಸಿದ್ಧರಿದ್ದೇವೆ." ಎಂದು ಎಲ್​. ನಾಗೇಶ್ವರ್ ರಾವ್ ಹಾಗೂ ಎಸ್​. ರವೀಂದ್ರ ಭಟ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.​

ABOUT THE AUTHOR

...view details