ನವದೆಹಲಿ: ಹೋಳಿ ರಜೆ ನಂತರ ವಿಚಾರಣೆಗೆ ಸಂಬಂಧಿಸಿದ ಅರ್ಜಿಗಳ ಪಟ್ಟಿಯನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದ್ದು, ಹಿಜಾಬ್ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆಯನ್ನು ಅದು ನಿರಾಕರಿಸಿದೆ.
ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, ಹಿಜಾಬ್ ನಿಷೇಧದ ವಿಷಯವನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದರು. ಆದರೆ, ಕೋರ್ಟ್ ಹೋಳಿ ರಜೆಯ ನಂತರ ವಿಚಾರಣೆಗೆ ಸಂಬಂಧಿಸಿದ ಅರ್ಜಿಗಳ ಪಟ್ಟಿಯನ್ನು ಪರಿಗಣಿಸುತ್ತೇವೆ ಎಂದಿದೆ.