ನವದೆಹಲಿ:ತಮಿಳುನಾಡಿನ ಥೇಣಿ ಕ್ಷೇತ್ರದ ಉಚ್ಛಾಟಿತ ಸಂಸದ, ಎಐಎಡಿಎಂಕೆ ಸದಸ್ಯ ಪಿ ರವೀಂದ್ರನಾಥ್ ಅವರ 2019 ರ ಚುನಾವಣೆಯನ್ನು ಅಸಿಂಧು ಎಂದು ಘೋಷಿಸಿದ ಮದ್ರಾಸ್ ಹೈಕೋರ್ಟ್ ಆದೇಶಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಸದ್ಯಕ್ಕೆ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತ ಅವರ ಪೀಠವು ರವೀಂದ್ರನಾಥ್ ಅವರು ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಅಂಗೀಕರಿಸಿದ್ದಾರೆ. ಥೇಣಿ ಕ್ಷೇತ್ರದಿಂದ ರವೀಂದ್ರನಾಥ್ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಪಿ ಮಿಲಾನಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
"ಜುಲೈ 6, 2023 ರಂದು ಮದ್ರಾಸ್‌ನ ಉಚ್ಚ ನ್ಯಾಯಾಲಯವು ಅಂಗೀಕರಿಸಿದ ಆಕ್ಷೇಪಾರ್ಹ ತೀರ್ಪು ಮತ್ತು ಆದೇಶದ ಕಾರ್ಯಾಚರಣೆಯನ್ನು ತಡೆಹಿಡಿಯಲಾಗುತ್ತದೆ. ಪರಿಣಾಮವಾಗಿ, ಮೇಲ್ಮನವಿದಾರಾದ ಪಿ ರವೀಂದ್ರನಾಥ್ ಅವರು 14ನೇ ಲೋಕಸಭಾ ಸದಸ್ಯರಾಗಿ ಮುಂದಿನ ಆದೇಶದ ವರೆಗೆ ಮುಂದುವರಿಯಲು ಅವಕಾಶ ನೀಡಲಾಗುತ್ತದೆ" ಎಂದು ಪೀಠವು ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ರವೀಂದ್ರನಾಥ್ ಅವರು ಪದಚ್ಯುತ ಎಐಎಡಿಎಂಕೆ ನಾಯಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರ ಪುತ್ರ. ರವೀಂದ್ರನಾಥ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಮ್ಮ ಚರ, ಸ್ಥಿರ ಆಸ್ತಿ ಮತ್ತು ಹೊಣೆಗಾರಿಕೆಗಳು ಮತ್ತು ಅವರ ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ವಿವಿಧ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ ಎಂದು ಪಿ ಮಿಲಾನಿ ಅವರು ಹೈಕೋರ್ಟ್‌ನಲ್ಲಿ ಆರೋಪಿಸಿದ್ದರು. ಸತ್ಯಾಂಶಗಳನ್ನು ಮುಚ್ಚಿರುವುದು ಚುನಾವಣೆಯ ಮೇಲೆ ಪರಿಣಾಮ ಬೀರಿದೆ ಎಂದು ಸಹ ಆರೋಪದಲ್ಲಿ ಸೇರಿಸಿದ್ದರು.
ಜುಲೈ 6ರಂದು ಹೈಕೋರ್ಟ್,''ಈ ಪ್ರಕರಣದಲ್ಲಿ ಮೂರನೇ ಪ್ರತಿವಾದಿ ರವೀಂದ್ರನಾಥ್ ಅವರ ನಾಮನಿರ್ದೇಶನವನ್ನು ಚುನಾವಣಾಧಿಕಾರಿ ಪರಿಶೀಲನೆ ಮಾಡಿರುವುದನ್ನು ಕೋರ್ಟ್ ಪರಿಶೀಲಿಸಿದೆ. ನಮತರ ಮೂರನೇ ವ್ಯಕ್ತಿ ಅರಪ್ಪೋರ್ ಇಯಕ್ಕಂ ಎತ್ತಿರುವ ಆಕ್ಷೇಪಣೆಯು ಮಾನ್ಯ ಮಾಡಿತ್ತು. ರವೀಂದ್ರನಾಥ್ ಮಾಹಿತಿಯನ್ನು ಬಹಿರಂಗಪಡಿಸದಿರುವುದು ಶಾಸನಬದ್ಧ ನಿಬಂಧನೆಗಳು ಮತ್ತು ಚುನಾವಣಾಧಿಕಾರಿಗಾಗಿ ನೀಡಲಾದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಅಫಿಡವಿಟ್ ಅನ್ನು ಸಲ್ಲಿಸಲಾಗಿದೆ".