ಕರ್ನಾಟಕ

karnataka

ETV Bharat / bharat

ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಭಾರಿ ಹಿನ್ನಡೆ: ಸಿಸಿಐ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್ - SC refuses to entertain pleas against CCI probe news

ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆಯ ಆರೋಪದ ಕುರಿತು ಪ್ರಾಥಮಿಕ ತನಿಖೆ ನಡೆಸಲು ಸಿಸಿಐಗೆ ಅನುಮತಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್​ನ ಅರ್ಜಿಗಳನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಕರ್ನಾಟಕ ಹೈಕೋರ್ಟ್ ಜುಲೈ 23 ರಂದು ಅಮೆಜಾನ್-ಫ್ಲಿಪ್‌ಕಾರ್ಟ್‌ ಸಿಸಿಐ ತನಿಖೆಗೆ ತಡೆ ನೀಡಲು ಕೋರಿದ್ದ ಅರ್ಜಿ ತಿರಸ್ಕರಿಸಿತ್ತು.

ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

By

Published : Aug 9, 2021, 3:38 PM IST

ನವದೆಹಲಿ:ಸ್ಪರ್ಧಾತ್ಮಕ ಕಾನೂನಿನ ಉಲ್ಲಂಘನೆಯ ಆರೋಪದ ಕುರಿತು ಪ್ರಾಥಮಿಕ ತನಿಖೆ ನಡೆಸಲು ಭಾರತದ ಸ್ಪರ್ಧಾ ಆಯೋಗ(ಸಿಸಿಐ)ಕ್ಕೆ ಅನುಮತಿ ನೀಡಿರುವ ಆದೇಶ ಪ್ರಶ್ನಿಸಿ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್​ನ ಅರ್ಜಿಗಳನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ, ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಹಾಗೂ ಸೂರ್ಯಕಾಂತ್​ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತು. ಫ್ಲಿಪ್‌ಕಾರ್ಟ್‌ ಪರ ಹಾಜರಾದ ಹಿರಿಯ ವಕೀಲ ಎಎಂ ಸಿಂಘ್ವಿ ಅವರು, ಸಿಸಿಐಗೆ ಪ್ರತಿಕ್ರಿಯಿಸುವ ಸಮಯ ಆಗಸ್ಟ್ 9 ರಂದು ಮುಕ್ತಾಯವಾಗುತ್ತಿದೆ ಎಂದು ಹೇಳಿದಾಗ, ಪೀಠವು ಸಿಸಿಐ ಅನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪಿಸಿದ ನಾಲ್ಕು ವಾರಗಳ ಸಮಯ ವಿಸ್ತರಿಸಿದೆ.

ಓದಿ:ಸಿಸಿಐ ತನಿಖೆ ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ ಫ್ಲಿಪ್ ಕಾರ್ಟ್, ಅಮೆಜಾನ್

ಕರ್ನಾಟಕ ಹೈಕೋರ್ಟ್ ಜುಲೈ 23 ರಂದು ಅಮೆಜಾನ್ - ಫ್ಲಿಪ್‌ಕಾರ್ಟ್‌ ಸಿಸಿಐ ತನಿಖೆಗೆ ತಡೆ ನೀಡಲು ಕೋರಿದ್ದ ಅರ್ಜಿ ತಿರಸ್ಕರಿಸಿತ್ತು. ಇ-ಕಾಮರ್ಸ್ ಸಂಸ್ಥೆಗಳು ನಿಯಮ ಉಲ್ಲಂಘನೆಯಲ್ಲಿ ಭಾಗಿಯಾಗದಿದ್ದರೆ ತನಿಖೆಯಿಂದ ಹಿಂದೆ ಸರಿಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

"ಈ ಹಂತದಲ್ಲಿ ವಿಚಾರಣೆ ಹತ್ತಿಕ್ಕಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಕಾನೂನಿನ ಯಾವುದೇ ನಿಬಂಧನೆಗಳ ಉಲ್ಲಂಘನೆಯಲ್ಲಿ ಅರ್ಜಿದಾರರು ಭಾಗಿಯಾಗಿಲ್ಲದಿದ್ದರೆ, ಅವರು ಭಾರತದ ಸ್ಪರ್ಧಾ ಆಯೋಗದ ವಿಚಾರಣೆಯನ್ನು ಎದುರಿಸಲು ಹಿಂಜರಿಯಬಾರದು" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಓದಿ: ಅಮೆಜಾನ್, ಫ್ಲಿಪ್​ಕಾರ್ಟ್ ವಿರುದ್ಧ ಸಿಸಿಐ ತನಿಖೆ: ನ್ಯಾಯ ತೀರ್ಮಾನಕ್ಕೆ ಕರ್ನಾಟಕ ಹೈಕೋರ್ಟ್​ಗೆ ಸುಪ್ರೀಂ ಸೂಚನೆ

For All Latest Updates

TAGGED:

ABOUT THE AUTHOR

...view details