ನವದೆಹಲಿ: ಮಹಾಮಾರಿ ಕೋವಿಡ್ ಅನ್ನು ಭಾರತ ನಿರ್ವಹಿಸಿದ ರೀತಿ ಜಗತ್ತಿನ ಯಾವುದೇ ದೇಶವೂ ನಿರ್ವಹಿಸಿಲ್ಲ ಎಂದು ಸುಪ್ರೀಂಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಮಾರಕ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ನೀಡುವ ಯೋಜನೆಯೂ ಕೋರ್ಟ್ ಪ್ರಶಂಸೆಗೆ ಕಾರಣವಾಗಿದೆ.
'ಕೋವಿಡ್ನಿಂದ ಸಾವನ್ನಪ್ಪಿ, ತೊಂದರೆಗೊಳಗಾಗಿರುವ ಅನೇಕ ಕುಟುಂಬಗಳಿಗೆ ಇದೀಗ ಸ್ವಲ್ಪಮಟ್ಟದ ಪರಿಹಾರ ಸಿಗುತ್ತಿದೆ. ಈ ಬಗ್ಗೆ ನಮಗೆ ಖುಷಿ ಇದೆ' ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಎ.ಎಸ್.ಬೋಪಣ್ಣ ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ:ಕೋವಿಡ್ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ : ಸುಪ್ರೀಂಕೋರ್ಟ್ಗೆ ಕೇಂದ್ರದ ಮಾಹಿತಿ
'ಕೋಟ್ಯಂತರ ಜನಸಂಖ್ಯೆ ಇರುವ ಭಾರತದಲ್ಲಿ ಕೋವಿಡ್ ಔಷಧಿ, ಲಸಿಕೆ, ಆಕ್ಸಿಜನ್ ಸೇರಿದಂತೆ ಅನೇಕ ರೀತಿಯ ಪ್ರತಿಕೂಲ ಸನ್ನಿವೇಶ ಎದುರಿಸಿದ್ದೇವೆ. ಆದರೆ ಭಾರತ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿರುವ ಸರ್ವೋಚ್ಛ ನ್ಯಾಯಾಲಯ, ಈ ರೀತಿಯ ಕೆಲಸ ಬೇರಾವುದೇ ದೇಶದಿಂದಲೂ ಆಗಿಲ್ಲ' ಎಂದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಕೋವಿಡ್ನಿಂದ ಮೃತಪಟ್ಟಿರುವ ಪ್ರತಿ ಕುಟುಂಬಕ್ಕೂ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಇದರ ಮೇಲಿನ ತೀರ್ಪು ಅಕ್ಟೋಬರ್ 4ಕ್ಕೆ ಕಾಯ್ದಿರಿಸಲಾಗಿದೆ.