ನವದೆಹಲಿ:2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಾದ ವೆರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾಗೆ ಸುಪ್ರೀಂ ಕೋರ್ಟ್ ಶುಕ್ರವಾರ ಷರತ್ತು ಬದ್ಧ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯ ಪೀಠವು, ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಆದರೆ, ಅವರಿಗೆ ಜಾಮೀನು ನೀಡಲು ಆಗುವುದಿಲ್ಲ ಎಂಬ ಅರ್ಥವಲ್ಲ ಎಂದು ಹೇಳಿದೆ.
ಜಾಮೀನು ನೀಡುವಾಗ ನ್ಯಾಯ ಪೀಠ ವಿಧಿಸಿದ ಷರತ್ತುಗಳೇನು?:ಜಾಮೀನು ನೀಡುವಾಗ ಪೀಠವು ಸೂಕ್ತ ಷರತ್ತುಗಳನ್ನು ವಿಧಿಸಿದೆ. "ನಾವು ದೋಷಾರೋಪಣೆಯ ಆದೇಶವನ್ನು ಬದಿಗಿರಿಸಿದ್ದೇವೆ. ಜೊತೆಗೆ ಮೇಲ್ಮನವಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತೇವೆ" ಎಂದು ತಿಳಿಸಿದೆ. ಅವರನ್ನು ಕಸ್ಟಡಿಗೆ ತೆಗೆದುಕೊಂಡು ಸುಮಾರು 5 ವರ್ಷಗಳು ಕಳೆದಿವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಪ್ರಕರಣದ ವಿವರವಾದ ತೀರ್ಪನ್ನು ದಿನದ ನಂತರ ಅಪ್‌ಲೋಡ್ ಮಾಡಲಾಗುತ್ತದೆ. ಜಾಮೀನಿನ ಷರತ್ತುಗಳನ್ನು ಓದಿದ ಪೀಠ, ಅರ್ಜಿದಾರರು ಮಹಾರಾಷ್ಟ್ರವನ್ನು ತೊರೆಯುವುದಿಲ್ಲ. ಅವರು ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು. ಅವರ ವಿಳಾಸದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗೆ ತಿಳಿಸಬೇಕು. ಮೊಬೈಲ್ ಸಂಖ್ಯೆಯನ್ನು ಎನ್‌ಐಎ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದೆ.
ಟ್ರ್ಯಾಕಿಂಗ್‌ಗಾಗಿ ಫೋನ್‌ನ ಸ್ಥಳವು ಆನ್ ಆಗಿರಬೇಕು ಮತ್ತು ಅದು ಎನ್‌ಐಎ ಅಧಿಕಾರಿಯೊಂದಿಗೆ ಸಿಂಕ್ ಆಗುವಂತೆ ಮಾಡಬೇಕು ಎಂದು ಪೀಠವು ಹೇಳಿದೆ. ಉಲ್ಲೇಖಿಸಿದ ಯಾವುದೇ ಷರತ್ತುಗಳು ಉಲ್ಲಂಘನೆಯಾದರೆ, ಈ ನ್ಯಾಯಾಲಯವನ್ನು ಜಾಮೀನು ರದ್ದುಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಸಾಕ್ಷಿಗಳ ಪ್ರಾಸಿಕ್ಯೂಷನ್‌ಗೆ ಬೆದರಿಕೆ ಹಾಕುವ ಯಾವುದೇ ಪ್ರಯತ್ನ ನಡೆದರೆ ಜಾಮೀನು ರದ್ದುಗೊಳಿಸಲು ಮುಂದಾಗಬಹುದು ಎಂದು ಪೀಠ ಸ್ಪಷ್ಟಪಡಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಾಂಬೆ ಹೈಕೋರ್ಟ್‌ನ ಡಿಸೆಂಬರ್ 2021ರ ತೀರ್ಪಿನ ವಿರುದ್ಧ ಅರ್ಜಿದಾರರು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.