ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ. ಪೇರರಿವಾಲನ್ನ ಪೆರೋಲ್ ಅವಧಿಯನ್ನು ಸುಪ್ರೀಂಕೋರ್ಟ್ ಒಂದು ವಾರ ಕಾಲ ವಿಸ್ತರಿಸಿದೆ.
ರಾಜೀವ್ ಗಾಂಧಿ ಹತ್ಯೆ ಕೇಸ್: ಅಪರಾಧಿಯ ಪೆರೋಲ್ ಅವಧಿ ವಿಸ್ತರಿಸಿದ ಸುಪ್ರೀಂ - AG Perarivalan
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ. ಪೇರರಿವಾಲನ್ನ ಪೆರೋಲ್ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿರುವ ಸುಪ್ರೀಂಕೋರ್ಟ್, ಮತ್ತೆ ವಿಸ್ತರಣೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ ವೈದ್ಯಕೀಯ ತಪಾಸಣೆಗಾಗಿ ಪೇರರಿವಾಲನ್ಗೆ ಪೆರೋಲ್ ನೀಡಲಾಗಿತ್ತು. ಇದೀಗ ಪೆರೋಲ್ ಅವಧಿ ವಿಸ್ತರಿಸಿ ಆದೇಶ ನೀಡಿರುವ ನ್ಯಾಯಾಲಯ, ಮತ್ತೆ ವಿಸ್ತರಣೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
1991ರ ಮೇ 21ರಂದು ತಮಿಳುನಾಡಿನ ಪೆರಂಬುದೂರು ಬಳಿ ಚುನಾವಣಾ ರ‍್ಯಾಲಿ ವೇಳೆ ಮಾನವ ಬಾಂಬ್ ಸ್ಫೋಟಿಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ 26 ಮಂದಿಗೆ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಸುಪ್ರೀಂಕೋರ್ಟ್ ಮೂವರ ಗಲ್ಲನ್ನು ಮಾತ್ರ ಖಾಯಂಗೊಳಿಸಿ, ನಾಲ್ವರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಮಾರ್ಪಡಿಸಿತ್ತು. ಉಳಿದ 19 ಮಂದಿಯನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆ ಆದವರಲ್ಲಿ ಮೂವರು ಮೃತಪಟ್ಟಿದ್ದಾರೆ.