ನವದೆಹಲಿ:ಕೋವಿಡ್ ಸಂದರ್ಭದಲ್ಲಿ ನಿಜಾಮುದ್ದೀನ್ ಮರ್ಕಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 9 ವಿದೇಶಿ ತಬ್ಲಿಘಿ ಜಮಾತ್ ಸದಸ್ಯರಿಗೆ ಭಾರತಕ್ಕೆ ಭೇಟಿ ನೀಡದಂತೆ 10 ವರ್ಷಗಳ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಇಬ್ಬರು ವಿದೇಶಿ ತಬ್ಲಿಘಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರ ಪೀಠವು, ಭವಿಷ್ಯದಲ್ಲಿ ಅವರು ಭಾರತಕ್ಕೆ ಭೇಟಿ ನೀಡಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದರೆ, ಹೈಕೋರ್ಟ್ ತೀರ್ಪು ಪರಿಗಣಿಸದೇ, ಅವರ ಅರ್ಹತೆಯ ಮೇಲೆ ವೀಸಾ ಪರಿಗಣಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಭಾರತಕ್ಕೆ ಭೇಟಿ ನೀಡಲು ಮೇಲ್ಮನವಿ ಸಲ್ಲಿಸಿರುವ ಇಬ್ಬರು ಹಾಗೂ ಉಳಿದ 8 ಮಂದಿ ಇಚ್ಛಿಸಿ ವೀಸಾಗೆ ಅರ್ಜಿ ಸಲ್ಲಿಸಿದರೆ, ಅಕ್ಟೋಬರ್ 13ರ ಹೈಕೋರ್ಟ್ ತೀರ್ಪನ್ನು ಗಣನೆಗೆ ತೆಗದುಕೊಳ್ಳದೇ, ಕೇವಲ ಅರ್ಹತೆ ಆಧಾರದ ಮೇಲೆ ಅವರನ್ನು ಪರಿಗಣಿಸಬೇಕು ಎಂದು ನಾವು ಸ್ಪಷ್ಟಪಡಿಸುತ್ತೇವೆ ಎಂದಿದ್ದಾರೆ.
ಈ ಮೊದಲು ಭಾರತಕ್ಕೆ ಭೇಟಿ ನೀಡದಂತೆ 9 ತಬ್ಲಿಘಿಗಳಿಗೆ 10 ವರ್ಷಗಳ ನಿರ್ಬಂಧ ಹೇರಿ ಹೈಕೋರ್ಟ್ ಆದೇಶಿಸಿತ್ತು.