ಕರ್ನಾಟಕ

karnataka

ETV Bharat / bharat

ವಯನಾಡ್​​ನಿಂದ ರಾಹುಲ್ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ತಿರಸ್ಕೃತ: 1 ಲಕ್ಷ ರೂಪಾಯಿ ದಂಡ

ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಆಯ್ಕೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸರಿತಾ ನಾಯರ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.

supreme court
ಸುಪ್ರೀಂಕೋರ್ಟ್

By

Published : Nov 2, 2020, 9:07 PM IST

ನವದೆಹಲಿ:ವಯನಾಡ್​ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿಯ ಆಯ್ಕೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಕೇರಳ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್​ಗೆ ಸುಪ್ರೀಂಕೋರ್ಟ್​ 1 ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿಯನ್ನು ತಿರಸ್ಕರಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಯ್ಕೆಯನ್ನು ಪ್ರಶ್ನಿಸಿ ಸರಿತಾ ನಾಯರ್ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ಅರ್ಜಿಯನ್ನು ವಜಾಗೊಳಿಸಿದ್ದು, ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಹಿಂದಿನ ವರ್ಷ ಅಕ್ಟೋಬರ್​​ನಲ್ಲಿ ಸೋಲಾರ್ ಪ್ಯಾನೆಲ್ ಹಗರಣಕ್ಕೆ ಸಂಬಂಧಿಸಿದಂತೆ ಸರಿತಾ ನಾಯರ್ ಹಾಗೂ ಆಕೆಯ ಪತಿ ಬಿಜು ರಾಧಾಕೃಷ್ಣನ್​ಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಕೊಯಮತ್ತೂರು ಕೋರ್ಟ್​ ವಿಧಿಸಿತ್ತು.

ಟೀಮ್ ಸೋಲಾರ್ ಎನರ್ಜಿ ಎಂಬ ಕಂಪನಿಯ ಮೂಲಕ ಸರಿತಾ ನಾಯರ್ ಕೋಟ್ಯಂತರ ರೂಪಾಯಿ ವಂಚಿಸಿದ್ದರು ಎಂಬ ಆರೋಪದ ಮೇಲೆ ಅವರಿಗೆ ಶಿಕ್ಷೆಯಾಗಿತ್ತು.

ABOUT THE AUTHOR

...view details